ಚಡಚಣ (ವಿಜಯಪುರ): ಪಟ್ಟಣದಲ್ಲಿ ಜೂ. 16 ರಂದು ಗುಂಡು ಹಾರಿಸಿ ರೌಡಿಶೀಟರ್ ಅಶೋಕ್ ಗಂಟಗಲ್ಲಿ ಎಂಬಾತನನ್ನು ಹತ್ಯೆ ಮಾಡಿದ ಪ್ರಕರಣದ ಬೆನ್ನು ಹತ್ತಿದ ಚಡಚಣ ಪೊಲೀಸರು ಅತೀ ದೂರದ ಮಧ್ಯಪ್ರದೇಶ ರಾಜ್ಯದಿಂದ ಭೀಮಾ ತೀರಕ್ಕೆ ಕಂಟ್ರಿ ಪಿಸ್ತೂಲ್ ಪೂರೈಸುತ್ತಿದ್ದ ಪ್ರಮುಖ ಆರೋಪಿಯನ್ನು ಬಂಧಿಸಿದ್ದಾರೆ.
ಮಹಾರಾಷ್ಟ್ರದ ಜಲಗಾಂವ್ ಜಿಲ್ಲೆಯ ಪಿಡಿಯಾ ಗ್ರಾಮದ ಮುಸ್ತಫಾ ಹೈದರ ತಡವಿ (36) ಬಂಧಿತ ಆರೋಪಿ. ಈತ ಮಧ್ಯಪ್ರದೇಶದ ರಾಜ್ಯದ ಗಡಿಭಾಗದ ಹಳ್ಳಿಯೊಂದರಿಂದ ಭೀಮಾ ತೀರದ ರೌಡಿಗಳಿಗೆ ಕಂಟ್ರಿ ಪಿಸ್ತೂಲ್ ಪೂರೈಸುತ್ತಿದ್ದ.
ಅಲ್ಲದೇ, ಚಡಚಣ ಶೂಟೌಟ್ ಪ್ರಕರಣದ ಆರೋಪಿಗಳಿಗೂ ಈತನೇ ಕಂಟ್ರಿ ಪಿಸ್ತೂಲ್ ಪೂರೈಸಿದ ಎಂಬ ಮಾಹಿತಿಯ ಹಿನ್ನೆಲೆಯಲ್ಲಿ ಪ್ರಕರಣದ ತನಿಖಾಧಿಕಾರಿ ಚಡಚಣ ಸಿಪಿಐ ಸುರೇಶ್ ಬೆಂಡೆಗೊಂಬಳ ಹಾಗೂ ಸಿಬ್ಬಂದಿಯು ಆರೋಪಿ ಮುಸ್ತಫಾನನ್ನು ಮಹಾರಾಷ್ಟ್ರದಲ್ಲಿ ಬಂಧಿಸಿ, ಆತನಿಂದ ಒಂದು ಕಂಟ್ರಿ ಪಿಸ್ತೂಲ್ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಇದನ್ನೂ ಓದಿ : ಭೀಮಾ ತೀರದಲ್ಲಿ ಮತ್ತೆ ಹರಿದ ನೆತ್ತರು; ಪಟ್ಟಣ ಪಂಚಾಯತ್ ಸದಸ್ಯೆ ಪತಿಯ ಭೀಕರ ಕೊಲೆ - MURDER CASE