ETV Bharat / snippets

ಪಾಲಿಕೆ ಸದಸ್ಯನ ಕೊಲೆ ಯತ್ನ ಕೇಸ್: 8 ವರ್ಷ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ

accused arrest
ಪೊಲೀಸ್​ ಠಾಣೆ, ಆರೋಪಿ (ETV Bharat)
author img

By ETV Bharat Karnataka Team

Published : May 30, 2024, 7:38 AM IST

ಹುಬ್ಬಳ್ಳಿ: ಕೆಲ ವರ್ಷಗಳ ಹಿಂದೆ ಹುಬ್ಬಳ್ಳಿ-ಧಾರವಾಡದ ಪಾಲಿಕೆ ಸದಸ್ಯ ಆರಿಫ್ ಭದ್ರಾಪೂರ್ ಅವರನ್ನು ಕೊಲೆ ಮಾಡುವ ಉದ್ದೇಶದಿಂದ ಅವರ ಮೇಲೆ ಹಲ್ಲೆಗೈದು, ಪರಾರಿಯಾದ ವ್ಯಕ್ತಿಯನ್ನು 8 ವರ್ಷಗಳ ಬಳಿಕ ಬಂಧಿಸುವಲ್ಲಿ ಇಲ್ಲಿನ ಶಹರ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಸೈಫ್ ಅಲಿ ಬಾಂಬೆ ಬಂಧಿತ ಆರೋಪಿ. ಈತ 2016ರಲ್ಲಿ ಗಣೇಶ್ ಪೇಟ್ ನಿವಾಸಿ ಆರಿಫ್ ಬದ್ರಾಪುರ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆಗೆ ಯತ್ನಿಸಿದ್ದ. ಅದೃಷ್ಟವಶಾತ್, ಆರಿಫ್ ಪ್ರಾಣಾಪಾಯದಿಂದ ಪಾರಾಗಿದ್ದರು. ಈ ಘಟನೆ ಕುರಿತು ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆಮರೆಸಿಕೊಂಡಿದ್ದ ಆರೋಪಿ ಸೈಫ್​ನನ್ನು ಎಂಟು ವರ್ಷಗಳ ಬಳಿಕ ಹುಬ್ಬಳ್ಳಿಯ ನವನಗರದಲ್ಲಿ ಬಂಧಿಸಲಾಗಿದೆ. ಖಚಿತ ಮಾಹಿತಿ ಮೇರೆಗೆ ಶಹರ ಠಾಣೆ ಇನ್ಸ್​​ಪೆಕ್ಟರ್ ರಫಿಕ್ ತಶೀಲ್ದಾರ್ ನೇತೃತ್ವದ ತಂಡ ಬಂಧಿಸಿ, ಜೈಲಿಗಟ್ಟಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಮುಂದುವರೆದ ಪೊಲೀಸ್ ಕಾರ್ಯಾಚರಣೆ, ರೌಡಿಶೀಟರ್​ಗಳ ಮೇಲೆ ದಾಳಿ: ಇಬ್ಬರು ಗಾಂಜಾ ಪೆಡ್ಲರ್​ಗಳ ಬಂಧ‌ನ - police raid on rowdies houses

ETV Bharat Logo

Copyright © 2024 Ushodaya Enterprises Pvt. Ltd., All Rights Reserved.