ETV Bharat / state

ಭೂಸ್ವಾಧೀನದ ವೇಳೆ ರೈತರು ಪಡೆದ ಪರಿಹಾರಕ್ಕೆ ತೆರಿಗೆ ವಿನಾಯಿತಿ: ಕ್ರಮ ಕೈಗೊಳ್ಳುವಂತೆ ಕೇಂದ್ರಕ್ಕೆ ಸೂಚಿಸಿದ ಹೈಕೋರ್ಟ್

ಭೂಸ್ವಾಧೀನದಿಂದ ರೈತರು ಪಡೆಯುವ ಪರಿಹಾರಕ್ಕೆ ತೆರಿಗೆ ವಿನಾಯಿತಿ ನೀಡುವ ಕುರಿತಂತೆ ಶೀಘ್ರವೇ ಕ್ರಮ ಕೈಗೊಳ್ಳಬೇಕು ಎಂದು ಕೇಂದ್ರಕ್ಕೆ ಹೈಕೋರ್ಟ್ ಸೂಚಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)
author img

By ETV Bharat Karnataka Team

Published : Nov 5, 2024, 10:37 PM IST

ಬೆಂಗಳೂರು: ಸಾರ್ವಜನಿಕ ಉದ್ದೇಶಗಳಿಗಾಗಿ ಭೂಮಿ ಸ್ವಾಧೀನಪಡಿಸಿಕೊಳ್ಳುವಾಗ ರೈತರಿಗೆ ನೀಡುವ ಪರಿಹಾರಕ್ಕೆ ಆದಾಯ ತೆರಿಗೆಯ ಪಾವತಿಯಿಂದ ವಿನಾಯಿತಿ ನೀಡುವ ಕುರಿತ ಸಮಸ್ಯೆಯನ್ನು ಶೀಘ್ರವೇ ಪರಿಹರಿಸಲು ಕ್ರಮ ತೆಗೆದುಕೊಳ್ಳಬೇಕು ಎಂದು ಕೇಂದ್ರ ಸರ್ಕಾರಕ್ಕೆ ಹೈಕೋರ್ಟ್‌ ಸೂಚನೆ ನೀಡಿದೆ.

ಈ ಕುರಿತಂತೆ ಏಕ ಸದಸ್ಯ ಪೀಠ 2023ರ ಏಪ್ರಿಲ್‌ 12 ರಂದು ಭೂಮಿ ಕಳೆದುಕೊಂಡವರ ಪರವಾಗಿ ನೀಡಿದ್ದ ತೀರ್ಪು ಪ್ರಶ್ನಿಸಿ ಆದಾಯ ತೆರಿಗೆ ಆಯುಕ್ತರು (ಟಿಡಿಎಸ್‌)ಸಲ್ಲಿಸಿದ ಮೇಲ್ಮನವಿ ಪುರಸ್ಕರಿಸಿದ ನ್ಯಾಯಮೂರ್ತಿ ಕೃಷ್ಣ ಎಸ್‌ ದೀಕ್ಷಿತ್‌ ಮತ್ತು ನ್ಯಾಯಮೂರ್ತಿ ವಿಜಯಕುಮಾರ್‌ ಎ ಪಾಟೀಲ್‌ ಅವರಿದ್ದ ವಿಭಾಗೀಯ ಪೀಠ ಈ ಸೂಚನೆ ನೀಡಿದೆ.

ಅಲ್ಲದೇ, 2013ರ ಭೂ ಸ್ವಾಧೀನ ಕಾಯಿದೆಯ ಹೊರತಾಗಿ ಇತರ ಕಾನೂನುಗಳಡಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡಾಗ ಅನೇಕ ರೈತರು ತಾವು ಪಡೆಯುವ ಪರಿಹಾರಕ್ಕೆ ಆದಾಯ ತೆರಿಗೆ ಪಾವತಿಸುವ ಬಗ್ಗೆ ಅತೃಪ್ತರಾಗಿದ್ದಾರೆ. ಆದ್ದರಿಂದ ಕೇಂದ್ರ ಸರ್ಕಾರ ಈ ಅಂಶವನ್ನು ಪರಿಹರಿಸಲು ಮತ್ತು ಭೂಮಿ ಕಳೆದುಕೊಂಡ ರೈತರ ಕುಂದು ಕೊರತೆಗಳನ್ನು ಪರಿಹರಿಸಲು ತಕ್ಷಣ ಕ್ರಮಗಳನ್ನು ತೆಗೆದುಕೊಳ್ಳಬೇಕು. 2013ರ ಕಾಯಿದೆಯ ಸೆಕ್ಷನ್‌ 96 ಭೂಮಿ ಕಳೆದುಕೊಳ್ಳುವ ಎಲ್ಲರಿಗೂ ಅನ್ವಯಿಸಬೇಕು ಎಂಬುದಾಗಿ ಪೀಠ ಆದೇಶಿಸಿದೆ.

ಭೂಸ್ವಾಧೀನ, ಪುನರ್ವಸತಿ ಮತ್ತು ಪುನರ್‌ ಸ್ಥಾಪನೆ ಕಾಯಿದೆ 2013 (2013 ಕಾಯಿದೆ)ಯಲ್ಲಿ ನ್ಯಾಯಯುತ ಪರಿಹಾರ ಮತ್ತು ಪಾರದರ್ಶಕತೆಯ ಹಕ್ಕು ಸೆಕ್ಷನ್‌ 96 ರ ಅಡಿ ಪರಿಹಾರವನ್ನು ಪಾವತಿಸಲು ಐಟಿ ವಿನಾಯಿತಿ ನೀಡಲಾಗುತ್ತದೆ. ಆದರೆ, ಅದಕ್ಕೂ ಮುಂಚೆಯೇ ಕರ್ನಾಟಕ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿ ಕಾಯಿದೆ 1966, ಕರ್ನಾಟಕ ಹೆದ್ದಾರಿಗಳ ಕಾಯಿದೆ 1964, ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಕಾಯಿದೆ 1987 ಇತ್ಯಾದಿಗಳಂತಹ ಸ್ಥಳೀಯ ಅಥವಾ ರಾಜ್ಯ ಕಾನೂನುಗಳು ಜಾರಿಗೆ ಬಂದಿವೆ. ಹಾಗಾಗಿ ಅವುಗಳಡಿ ಪರಿಹಾರ ಪಡೆಯುವ ರೈತರಿಗೂ ಆದಾಯ ತೆರಿಗೆ ವಿನಾಯ್ತಿ ನೀಡಬೇಕಾಗುತ್ತದೆ ಎಂದು ಪೀಠ ಹೇಳಿದೆ.

2013ರ ಕಾಯಿದೆಯ ಸೆಕ್ಷನ್‌ 96ರ ನಿಬಂಧನೆಗಳು ತಾರತಮ್ಯದಿಂದ ಕೂಡಿವೆ. ಆದ್ದರಿಂದ, ಇದು ಅನುಚ್ಛೇದ 14 ರ ಉಲ್ಲಂಘನೆಯಾಗಿದೆ ಎಂದು ಅನೂರ್ಜಿತಗೊಳಿಸಲಾಗದು. ಆದರೂ ಕಾನೂನಿಗೆ ಅನುಸಾರವಾಗಿ ಪಾವತಿಸಿದ ತೆರಿಗೆ ಮರುಪಾವತಿಯನ್ನು ಪಡೆಯಲು ರಾಜ್ಯದ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲು ಭೂಮಿ ಕಳೆದುಕೊಳ್ಳುವವರು ಮುಕ್ತವಾಗಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಮುಡಾ ಹಗರಣ ಸಿಬಿಐ ತನಿಖೆಗೆ ಕೋರಿದ್ದ ಅರ್ಜಿ: ಕೇಂದ್ರ, ರಾಜ್ಯ, ಸಿದ್ದರಾಮಯ್ಯ ಮತ್ತವರ ಪತ್ನಿಗೆ ಹೈಕೋರ್ಟ್ ನೋಟಿಸ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.