ಧಾರವಾಡ: ಕಳೆದೊಂದು ವಾರದಿಂದ ಜಿಲ್ಲೆಯಲ್ಲಿ ಮಳೆಯ ಅಬ್ಬರ ಜೋರಾಗಿದೆ. ಸೋಮವಾರ ರಾತ್ರಿ ಸುರಿದ ಭಾರಿ ಮಳೆಯಿಂದ ಉಂಟಾದ ಹಳ್ಳದ ಪ್ರವಾಹಕ್ಕೆ 20 ಎಮ್ಮೆಗಳು ಕೊಚ್ಚಿ ಹೋದ ಘಟನೆ ಅಳ್ನಾವರ ತಾಲೂಕಿನ ಶಿವನಗರ ಗ್ರಾಮದಲ್ಲಿ ನಡೆದಿದೆ. ಸದ್ಯ 7 ಎಮ್ಮೆಗಳ ಮೃತದೇಹ ಪತ್ತೆಯಾಗಿದ್ದು, ಉಳಿದ ಎಮ್ಮೆಗಳಿಗಾಗಿ ಗ್ರಾಮಸ್ಥರು ಹುಡುಕಾಟ ನಡೆಸಿದ್ದಾರೆ.
ಹಳ್ಳದ ದಂಡೆಯ ಮೇಲೆ ಅಲ್ಲಲ್ಲಿ ಎಮ್ಮೆಯ ಮೃತದೇಹಗಳು ಪತ್ತೆಯಾಗಿವೆ. ಶಿವನಗರ ಗ್ರಾಮದಲ್ಲಿ ಗವಳಿ ಜನಾಂಗ ಜಾಸ್ತಿ ಇರುವುದರಿಂದ ಅವರಿಗೆ ಸೇರಿದ ಎಮ್ಮೆಗಳು ಹೆಚ್ಚಿವೆ. ನಿನ್ನೆ ಸುರಿದ ಮಳೆಯಿಂದ ಅವುಗಳನ್ನು ಹುಡುಕುತ್ತಾ ಹೊರಡುವಂತಾಗಿದೆ. ಸಿದ್ದು ಯಮಕರ ಎಂಬುವವರ 3, ಜಾನು ಶಿಂಧೆ, ಬಮ್ಮ ಯಮಕರ ಎಂಬುವವರ ತಲಾ 2 ಎಮ್ಮೆಗಳ ಮೃತದೇಹ ಪತ್ತೆಯಾಗಿದ್ದು, ಉಳಿದ ಎಮ್ಮೆಗಳಿಗಾಗಿ ಶೋಧ ಕಾರ್ಯ ನಡೆಸಲಾಗಿದೆ. ಅಳ್ನಾವರ ಠಾಣೆ ವ್ಯಾಪ್ತಿಯಲ್ಲಿಈ ಘಟನೆ ನಡೆದಿದೆ.
ಇದನ್ನೂ ಓದಿ: ತಗ್ಗದ ಮಳೆಯ ಅಬ್ಬರ - ಹಳ್ಳದಲ್ಲಿ ಕೊಚ್ಚಿಹೋದ ಕಾರು; ಬೆಂಗಳೂರು ಸೇರಿ ಹಲವು ಜಿಲ್ಲೆಗಳಲ್ಲಿ ಮತ್ತೆ ಯೆಲ್ಲೋ ಅಲರ್ಟ್