ಬಾಲಿವುಡ್ ದಿವಾ ದೀಪಿಕಾ ಪಡುಕೋಣೆ ಇತ್ತೀಚೆಗೆ 'ಕಲ್ಕಿ' ಚಿತ್ರದ ಪ್ರೀ-ರಿಲೀಸ್ ಈವೆಂಟ್‌ನಲ್ಲಿ ಭಾಗವಹಿಸಿ ದೊಡ್ಡ ಮಟ್ಟದ ಹವಾ ಕ್ರಿಯೇಟ್ ಮಾಡಿದ್ದಾರೆ. ಬೇಬಿ ಬಂಪ್ ನೊಂದಿಗೆ ಕಾಣಿಸಿಕೊಂಡು ಎಲ್ಲರನ್ನೂ ಆಕರ್ಷಿಸಿದ್ದಾರೆ. ಕಪ್ಪು ಬಣ್ಣದ ಒನ್ ಪೀಸ್ ಡ್ರೆಸ್ ಧರಿಸಿ ಮಿರ ಮಿರ ಮಿಂಚಿದ್ದಾರೆ. ಆಕೆಯ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ. ಸಿಂಪಲ್ ಆಗಿ ಕಂಡರೂ ಡ್ರೆಸ್ ಬೆಲೆ ಅಗಾಧವಾಗಿದೆ ಎಂದು ನೆಟ್ಟಿಗರು ಪಿಸುಗುಟ್ಟುತ್ತಿದ್ದಾರೆ.
ಆ ಡ್ರೆಸ್ ಅನ್ನು ದೀಪಿಕಾಗಾಗಿಯೇ ಫೇಮಸ್ ಕಂಪನಿಯೊಂದು ವಿಶೇಷವಾಗಿ ತಯಾರಿಸಿತ್ತು ಎನ್ನಲಾಗಿದೆ. ಮಾರುಕಟ್ಟೆ ಮೂಲಗಳ ಪ್ರಕಾರ ಇದರ ಬೆಲೆ ಸುಮಾರು 1.2 ಲಕ್ಷ ರೂ. ಎಂದು ಹೇಳಲಾಗುತ್ತಿದೆ. ಇದನ್ನು ಕೇಳಿದ ಅಭಿಮಾನಿಗಳು ಶಾಕ್ ಆಗಿದ್ದಾರೆ. ಇನ್ನು ಕೆಲವರು ಈ ಡ್ರೆಸ್ಸಿಂಗ್ ಸ್ಟೈಲ್ ಚೆನ್ನಾಗಿದೆ ಎಂದು ಕಾಮೆಂಟ್ ಸಹ ಮಾಡುತ್ತಿದ್ದಾರೆ.