ಶಿವಮೊಗ್ಗ: ಚುನಾವಣಾ ಪಥಸಂಚಲನದಲ್ಲಿ ಭಾಗಿಯಾಗಿದ್ದ ಯೋಧರಿಗೆ ಆರತಿ ಬೆಳಗಿದ ಮಹಿಳೆಯರು - Lok Sabha Election
🎬 Watch Now: Feature Video
ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಶಾಂತಿಯುತ ಮತದಾನ ನಡೆಸುವ ಉದ್ದೇಶದಿಂದ ಜಿಲ್ಲಾಡಳಿತವು ಪೊಲೀಸ್ ಹಾಗೂ ಸಿಆರ್ಪಿಎಫ್ ಯೋಧರ ಪಥಸಂಚಲನವನ್ನು ಶಿವಮೊಗ್ಗದ ಎಲ್ಲೆಡೆ ನಡೆಸುತ್ತಿದೆ. ಹೀಗೆ ಪಥಸಂಚಲನದಲ್ಲಿ ಪಾಲ್ಗೊಂಡಿದ್ದ ಯೋಧರಿಗೆ ಶಿಕಾರಿಪುರ ತಾಲೂಕು ಪುಣೇದಹಳ್ಳಿ ಗ್ರಾಮದಲ್ಲಿ ಮಹಿಳೆಯರು ಆರತಿ ಬೆಳಗಿ ಹಣೆಗೆ ತಿಲಕ ಇಟ್ಟು ಸ್ವಾಗತ ಕೋರಿದ್ದಾರೆ.
ಮತ್ತೊಂದೆಡೆ, ಇತ್ತೀಚೆಗೆ ಮತದಾರರಲ್ಲಿ ಅರಿವು ಮೂಡಿಸಲು ಶಿವಮೊಗ್ಗ ಮಹಾನಗರ ಪಾಲಿಕೆಯ ಶಿಕ್ಷಣ ಮತ್ತು ಸಹಭಾಗಿತ್ವ ಸಮಿತಿ (ಸ್ವೀಪ್) ವತಿಯಿಂದ ವಿಭಿನ್ನ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಕಳೆದ ಚುನಾವಣೆಯಲ್ಲಿ ಶಿವಮೊಗ್ಗ ಆರ್ಎಂಎಲ್ ನಗರದಲ್ಲಿ ಕಡಿಮೆ ಮತದಾನ ನಡೆದಿತ್ತು. ಹೀಗಾಗಿ ಮಹಾನಗರ ಪಾಲಿಕೆಯ ಸ್ವೀಪ್ ಸಮಿತಿ ವತಿಯಿಂದ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಮ್ಯೂಸಿಕಲ್ ಚೇರ್ ಆಡಿಸಿ ಮತದಾನ ಜಾಗೃತಿ ಮೂಡಿಸಲಾಯಿತು. ಮತದಾನದ ದಿನ ಇದೇ ಉತ್ಸಾಹದಲ್ಲಿ ತಪ್ಪದೆ ಮಾತದಾನ ಮಾಡಬೇಕು ಎಂದು ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಈ ವೇಳೆ ಸ್ವೀಪ್ ನೊಡಲ್ ಅಧಿಕಾರಿಗಳಾದ ಅನುಪಮಾ ಟಿ.ಆರ್.ಸುಪ್ರಿಯಾ ರತ್ನಾಕರ್ ಸೇರಿದಂತೆ ಇತರೆ ಅಧಿಕಾರಿ ಮತ್ತು ಸಿಬ್ಬಂದಿ, ಬಿಎಲ್ಓಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: ನಾನು ಚುನಾವಣೆಯಲ್ಲಿ ಸ್ಪರ್ಧಿಸಲಿ ಅಂತಾನೇ ಅಮಿತ್ ಶಾ ನನ್ನನ್ನು ಭೇಟಿಯಾಗಿಲ್ಲ: ಈಶ್ವರಪ್ಪ - SHIVAMOGGA CONSTITUENCY