ವಯನಾಡಿನ ಜನನಿಬಿಡ ವಾಸಸ್ಥಳಕ್ಕೆ ನುಗ್ಗಿದ ಕಾಡಾನೆ.. ಶಾಂತಗೊಳಿಸಿದ ಅರಣ್ಯ ಇಲಾಖೆ ಸಿಬ್ಬಂದಿ
🎬 Watch Now: Feature Video
ವಯನಾಡು (ಕೇರಳ) : ಸುದೀರ್ಘ 13 ಗಂಟೆಗಳ ಕಾರ್ಯಾಚರಣೆಯ ನಂತರ ನೆರೆಯ ಕರ್ನಾಟಕ ಅರಣ್ಯದಿಂದ ವಯನಾಡಿನ ಜನನಿಬಿಡ ಮಾನಂತವಾಡಿ ಪಟ್ಟಣಕ್ಕೆ ಪ್ರವೇಶಿಸಿದ ಕಾಡಾನೆ 'ತಣ್ಣೀರ್ ಕೊಂಬನ್' ಶಾಂತಗೊಳಿಸುವಲ್ಲಿ ಡಾಟಿಂಗ್ ತಜ್ಞರ ಕ್ಷಿಪ್ರ ಕಾರ್ಯಾಚರಣೆ ತಂಡ ಮತ್ತು ಅರಣ್ಯ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ. ಜಿಲ್ಲಾಡಳಿತವು ಈ ಹಿಂದೆ ನಿಷೇಧಾಜ್ಞೆ ಹೊರಡಿಸಿತ್ತು. ಕಾಡಾನೆ ಮಾನವ ವಾಸಸ್ಥಳದ ಸಮೀಪವಿತ್ತು. ಬಾಳೆ ತೋಟಗಳಿಂದ ಸುತ್ತುವರೆದಿರುವ ಸಣ್ಣ ವಸತಿ ಪ್ರದೇಶದಲ್ಲಿ ಆನೆಯು ಸಂಚರಿಸುತ್ತಿದ್ದಂತೆ ಅರಣ್ಯ ಅಧಿಕಾರಿಗಳು ನಿರಂತರವಾಗಿ ನಿಗಾ ಇರಿಸಿದ್ದರು.
ಮಧ್ಯಾಹ್ನದ ವೇಳೆಗೆ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು (ವನ್ಯಜೀವಿಗಳು) ಕಾಡಾನೆಯನ್ನು ಶಾಂತಗೊಳಿಸಲು ಮತ್ತು ಸೆರೆಹಿಡಿಯಲು ವಿಶೇಷ ಆದೇಶವನ್ನು ಹೊರಡಿಸಿದರು. ಕಾಡಾನೆಯನ್ನು ಶಾಂತಗೊಳಿಸಲು ಡಾಟಿಂಗ್ ತಜ್ಞರು, ಅರಣ್ಯ ಇಲಾಖೆಯ ಪಶುವೈದ್ಯರು ಮತ್ತು ಕ್ಷಿಪ್ರ ಕಾರ್ಯಾಚರಣೆ ತಂಡವನ್ನು ನಿಯೋಜಿಸಲಾಗಿತ್ತು. ಇಲಾಖೆಯು ಮೊದಲು ಆನೆಯನ್ನು ಶಾಂತಗೊಳಿಸಿ ನಂತರ ಕರ್ನಾಟಕದ ಬಂಡೀಪುರ ರಾಷ್ಟ್ರೀಯ ಉದ್ಯಾನಕ್ಕೆ ಸ್ಥಳಾಂತರಿಸಲು ಯೋಜಿಸಿತ್ತು.
ಶುಕ್ರವಾರ ಬೆಳಗಿನ ಜಾವ ರೇಡಿಯೋ ಕಾಲರ್ ಹೊಂದಿದ್ದ ಕಾಡಾನೆಯು ನಗರದ ಹೃದಯಭಾಗಕ್ಕೆ ನುಗ್ಗಿಸ್ಥಳೀಯರನ್ನು ಭಯಭೀತಗೊಳಿಸಿತ್ತು. ಪೊಲೀಸರು ಈ ವಲಯದಿಂದ ಜನರನ್ನು ಸ್ಥಳಾಂತರಿಸಿದ್ದರು. ವಯನಾಡಿನ ಎಲ್ಲಾ ಮೂರು ಅರಣ್ಯ ವಿಭಾಗಗಳ ಆರ್‌ಆರ್‌ಟಿಗಳ (ರಾಪಿಡ್ ರೆಸ್ಪಾನ್ಸ್ ಟೀಮ್‌ಗಳು) ಆನೆ ಟ್ರ್ಯಾಕರ್‌ಗಳು ಮತ್ತು ಸೆರೆಹಿಡಿಯುವ ಪರಿಣಿತರನ್ನು ಕಾರ್ಯಾಚರಣೆಗಾಗಿ ನಿಯೋಜಿಸಲಾಗಿತ್ತು. ಸಂಜೆ 5.30 ರ ಹೊತ್ತಿಗೆ ಅವರು 'ತಣ್ಣೀರ್ ಕೊಂಬನ್' ಎಂಬ ಹೆಸರಿನ ಈ ಆನೆಯನ್ನು ಯಶಸ್ವಿಯಾಗಿ ಶಾಂತಗೊಳಿಸಿದರು.
ಇದನ್ನೂ ಓದಿ: ಅಟ್ಟಹಾಸ ಮೆರೆದಿದ್ದ ಕಾಡಾನೆ ಅಂತೂ ಸೆರೆ: ಆನೆ ಶಿಬಿರಕ್ಕೆ ಸ್ಥಳಾಂತರ