ಉಡುಪಿ ಕೃಷ್ಣ ಮಠದ ಗಣಪತಿ ‌ನಿಮಜ್ಜನ; ಹುಲಿ ವೇಷಧಾರಿಗಳೊಂದಿಗೆ ಜನರ ಸಖತ್​ ಸ್ಟೆಪ್ಸ್​ - Udupi Ganapati Immersion

By ETV Bharat Karnataka Team

Published : Sep 12, 2024, 5:21 PM IST

thumbnail
ಉಡುಪಿ ಕೃಷ್ಣ ಮಠದ ಗಣಪತಿ ‌ನಿಮಜ್ಜನ (ETV Bharat)

ಉಡುಪಿ: ಗಣೇಶ ಚತುರ್ಥಿಯ ಪ್ರಯುಕ್ತ ಶ್ರೀ ಕೃಷ್ಣಮಠದಲ್ಲಿ ಹಾಗೂ ಗೀತಾಮಂದಿರದಲ್ಲಿ ಪೂಜಿಸಲ್ಪಟ್ಟ ಗಣಪತಿಯ ನಿಮಜ್ಜನ ಮೆರವಣಿಗೆಯು ವಿಜೃಂಭಣೆಯಿಂದ ನಡೆಯಿತು. ಗಣಪತಿ ಮೂರ್ತಿಯನ್ನು ಆಕರ್ಷಕ ಟ್ಯಾಬ್ಲೋದಲ್ಲಿಟ್ಟು ರಥಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು.

ನಿಮಜ್ಜನದ ವೇಳೆ ಮಠದ ಅರ್ಚಕರು, ಬಾಣಸಿಗರು ಹಾಗೂ ಸಿಬ್ಬಂದಿ ಭರ್ಜರಿ ಡ್ಯಾನ್ಸ್​​ ಮಾಡಿದರು. ಪರ್ಯಾಯ ಪುತ್ತಿಗೆ ಮಠಾಧೀಶರ ಸಮ್ಮುಖದಲ್ಲಿ ಕುಣಿದು ಕುಪ್ಪಳಿಸಿದರು. ಹುಲಿ ವೇಷದ ತಾಸೆಯ ಪೆಟ್ಟಿಗೆ, ವೇಷಧಾರಿಗಳೊಂದಿಗೆ ವೇಷಧಾರಿಗಳನ್ನೂ ಮೀರಿ ಎಲ್ಲರೂ ಕುಣಿಡಾಡಿದರು. ಮಠದ ಅರ್ಚಕರು, ಅರ್ಚಕರ ಪತ್ನಿಯರು, ಮಕ್ಕಳು ಹಾಗೂ ಮಹಿಳೆಯರು ಭೇದವಿಲ್ಲದೇ ಹುಲಿವೇಷ ಹೆಜ್ಜೆ ಸಖತ್​ ಸ್ಟೆಪ್ಟ್​ ಹಾಕಿದರು. ಮಠದ ಸಿಬ್ಬಂದಿಯೇ ಹುಲಿವೇಷ ಧರಿಸಿ, ಹೆಜ್ಜೆ ಹಾಕಿರುವುದು ವಿಶೇಷವಾಗಿತ್ತು.

ಹುಲಿ ವೇಷಧಾರಿಗಳೊಂದಿಗೆ ಅನ್ಯವೇಷಧಾರಿಗಳು ಕೂಡ ಕುಣಿದು ಗಮನ ಸೆಳೆದರು. ಮೆರವಣಿಗೆಯಲ್ಲಿ ಪರ್ಯಾಯ ಪುತ್ತಿಗೆ ಮಠಾಧೀಶರಾದ ಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಸುಶೀಂದ್ರತೀರ್ಥ ಶ್ರೀಪಾದರು, ಮಠದ ದಿವಾನ ನಾಗರಾಜ್ ಆಚಾರ್ಯ, ಕಾರ್ಯದರ್ಶಿ ಪ್ರಸನ್ನ ಆಚಾರ್ಯ ಹಾಗೂ ನೂರಾರು ಮಂದಿ ಮಠದ ಭಕ್ತಾದಿಗಳು ಪಾಲ್ಗೊಂಡರು. ಬಳಿಕ ಮಧ್ವ ಸರೋವರದಲ್ಲಿ ಗಣಪತಿ ವಿಗ್ರಹವನ್ನು ನಿಮಜ್ಜನ ಮಾಡಲಾಯಿತು. 

ಇದನ್ನೂ ಓದಿ: ದಸರಾ ಜಂಬೂ ಸವಾರಿ ಕುಶಾಲತೋಪು ಸಿಡಿಸುವ ಫಿರಂಗಿಗಳಿಗೆ ಸಾಂಪ್ರದಾಯಿಕ ಪೂಜೆ - Firing Cannons Puja

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.