ಮೈದುಂಬಿ ಹರಿಯುತ್ತಿರುವ ತಂಗಭದ್ರಾ: ದಾವಣಗೆರೆಯಲ್ಲಿ ಪ್ರವಾಹ, ಇಡೀ ಊರೇ ಜಲಾವೃತ - Tungabhadra Flood
🎬 Watch Now: Feature Video
Published : Aug 1, 2024, 10:50 PM IST
ದಾವಣಗೆರೆ: ಜಿಲ್ಲೆಯ ಜೀವನಾಡಿ ತುಂಗಭದ್ರಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು, ಜನವಸತಿ ಪ್ರದೇಶಗಳಿಗೆ ಪ್ರವಾಹದ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಇಡೀ ಊರೇ ಜಲಾವೃತವಾಗಿದ್ದು, ಮನೆಗಳನ್ನು ಬಿಟ್ಟು ಜನರು ಕಾಳಜಿ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದಾರೆ.
ಹೊನ್ನಾಳಿ ಪಟ್ಟಣದ ಸಮೀಪದಲ್ಲೇ ಹರಿಯುವ ತುಂಗಭದ್ರಾ ನದಿ ಜನರ ಬದುಕನ್ನು ಕಸಿದುಕೊಂಡಿದೆ. ಇಲ್ಲಿನ ಬಾಲ್ರಾಜ್ ಘಾಟ್ ಪ್ರದೇಶದ ಪ್ರವಾಹದ ನೀರಿನಲ್ಲಿ ಮುಳುಗಿದೆ. ಇದರಿಂದ 25ಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿವೆ.
ಬಾಲ್ರಾಜ್ಘಾಟ್ ಪ್ರದೇಶ ತುಂಗಭದ್ರಾ ನದಿ ತೀರದಲ್ಲಿ ಇರುವುದರಿಂದ ಇಂತಹ ಸಮಸ್ಯೆ ಪ್ರತಿವರ್ಷ ಸಂಭವಿಸುತ್ತದೆ. ಮನೆಗಳು ನೀರಿನಿಂದ ಜಲಾವೃತವಾಗಿದ್ದರಿಂದ ಹೊನ್ನಾಳಿ ತಾಲೂಕು ಆಡಳಿತ ಮುಂಜಾಗ್ರತಾ ಕ್ರಮವಾಗಿ ಡಾ.ಬಿ.ಆರ್.ಅಂಬೇಡ್ಕರ್ ಸಮುದಾಯ ಭವನದಲ್ಲಿ ಕಾಳಜಿ ಕೇಂದ್ರವನ್ನು ತೆರೆದಿದೆ.
ಇಲ್ಲಿನ ಜನರನ್ನು ಕಾಳಜಿ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಅವರಿಗೆ ಬೇಕಾದ ಸವಲತ್ತುಗಳನ್ನು ನೀಡಲಾಗುತ್ತಿದೆ. ಪ್ರತಿಬಾರಿಯೂ ಮಳೆ ಸುರಿದಾಗ ತುಂಗಾ ಮತ್ತು ಭದ್ರಾ ಮೈದುಂಬಿ ಹರಿದಾಗ ಈ ಸಮಸ್ಯೆ ತಪ್ಪಿದ್ದಲ್ಲ. ಹೀಗಾಗಿ ಇಲ್ಲಿನ ಜನರು ತಮಗೆ ಪರ್ಯಾಯ ಜಾಗ ನೀಡುವಂತೆ ಜನಪ್ರತಿನಿಧಿಗಳು, ಸ್ಥಳೀಯ ಆಡಳಿತಕ್ಕೆ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ, ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ತುಂಗಭದ್ರಾ ಜಲಾಶಯದಿಂದ ನದಿಗೆ ಒಂದು ಲಕ್ಷಕ್ಕೂ ಅಧಿಕ ಕ್ಯೂಸೆಕ್ ನೀರನ್ನು ಹೊರಬಿಡಲಾಗಿದೆ.
ಇದನ್ನೂ ಓದಿ: ಮಂಗಳೂರಿನ ಫಲ್ಗುಣಿ ನದಿ ಪ್ರವಾಹ: ಮನೆ ಕುಸಿದು ಮಹಿಳೆ, ಶೆಡ್ ಬಿದ್ದು 5 ಸಾವಿರ ಕೋಳಿ ಸಾವು - Dakshina Kannada Rain Havoc