ಚಿಕ್ಕಬಳ್ಳಾಪುರ: ಕಾರಿನ ಗ್ಲಾಸ್ ಒಡೆದು 2 ಲಕ್ಷ ಕಳವು- ಸಿಸಿಟಿವಿ ದೃಶ್ಯ - Money Theft - MONEY THEFT
🎬 Watch Now: Feature Video
Published : Aug 14, 2024, 9:34 PM IST
ಚಿಕ್ಕಬಳ್ಳಾಪುರ: ಹೋಟೆಲ್ ಮುಂದೆ ನಿಲ್ಲಿಸಲಾಗಿದ್ದ ಕಾರ್‌ನ ಗ್ಲಾಸ್ ಪುಡಿಗಟ್ಟಿ ಹಣ ದೋಚಿರುವ ಘಟನೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೋಲಾರ ರಸ್ತೆಯ ಪಟೇಲ್ ಹೋಟೆಲ್ ಮುಂಭಾಗ ಇಂದು ಬೆಳಗ್ಗೆ 12:00ರ ವೇಳೆಗೆ ನಡೆದಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರ ನಿವಾಸಿಯಾದ ಶಿವಕುಮಾರ್ ಎಂಬವರು ಮರಗಳನ್ನು ಕಟಾವ್ ಮಾಡುವ ಮಷಿನ್ ಖರೀದಿಸಲು ಚಿಂತಾಮಣಿ ನಗರಕ್ಕೆ ಬಂದಿದ್ದರು. ಊಟ ಮಾಡಲೆಂದು ನಗರದ ಕೋಲಾರ ರಸ್ತೆಯಲ್ಲಿರುವ ಪಟೇಲ್ ಹೋಟೆಲ್ಗೆ ತಮ್ಮ ಕಾರಿನಲ್ಲಿ ಹೋಗಿದ್ದಾರೆ.
ಇದನ್ನು ಗಮನಿಸಿದ ಕಳ್ಳ ಹೋಟೆಲ್ ಮುಂಭಾಗ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಸುಮಾರು ಎರಡು ಲಕ್ಷ ರೂ. ಹಣ ದೋಚಿ ಪರಾರಿಯಾಗಿದ್ದಾನೆ. ಘಟನೆಯ ವಿಷಯ ತಿಳಿದ ತಕ್ಷಣ ಡಿವೈಎಸ್ಪಿ ಮುರಳೀಧರ್, ನಗರ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ವಿಜಿ ಕುಮಾರ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ : ಹಾಡಹಗಲೇ ಕಾರಿನ ಗಾಜು ಒಡೆದು ಲಕ್ಷಾಂತರ ರೂಪಾಯಿ ಕಳ್ಳತನ: ಸಿಸಿಟಿವಿ ವಿಡಿಯೋ - Money Theft