ಮದವೇರಿದ ಧನಂಜಯ ಆನೆಯನ್ನ ಒಂಟಿಯಾಗಿ ಕಟ್ಟಿದ ಮಾವುತರು : ವಿಡಿಯೋ - mahout tied the Dhananjaya elephant - MAHOUT TIED THE DHANANJAYA ELEPHANT
🎬 Watch Now: Feature Video
Published : Aug 29, 2024, 7:55 PM IST
ಮೈಸೂರು : ನಾಡಹಬ್ಬ ದಸರಾ ಮಹೋತ್ಸವದಲ್ಲಿ ಭಾಗವಹಿಸಲು ಗಜಪಯಣದ ಮೂಲಕ ಗಜಪಡೆಯ ಮೊದಲ ತಂಡದಲ್ಲಿ ಆಗಮಿಸಿರುವ ಧನಂಜಯ್ ಆನೆಗೆ ಮದವೇರಿದ್ದು, ಇದೀಗ ಅದನ್ನು ಒಂಟಿಯಾಗಿಯೇ ಕಟ್ಟಲಾಗಿದೆ.
ದಸರಾದ ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸಲು ಕಾಡಿನ ವಿವಿಧ ಆನೆ ಶಿಬಿರಗಳಿಂದ ಗಜಪಯಣದ ಮೂಲಕ ಮೊದಲ ಹಂತದ ಅಭಿಮನ್ಯು ನೇತೃತ್ವದ 9 ಆನೆಗಳು ಆಗಸ್ಟ್ 21 ರಂದು ಮೈಸೂರಿಗೆ ಆಗಮಿಸಿದ್ದು, ಆಗಸ್ಟ್ 23 ರಂದು ಮೈಸೂರು ಅರಮನೆಯನ್ನ ಪ್ರವೇಶ ಮಾಡಿವೆ. ಇಲ್ಲಿ ಗಜಪಡೆಗಳಿಗೆ ವಿಶಿಷ್ಟವಾಗಿ ಹಾಗೂ ಪೌಷ್ಟಿಕ ಆಹಾರಗಳನ್ನ ನೀಡಲಾಗುತ್ತಿದೆ.
ಧನಂಜಯ ಆನೆ ದುಬಾರೆ ಆನೆ ಶಿಬಿರದಿಂದ ಆಗಮಿಸಿದೆ. 44 ವರ್ಷದ ಧನಂಜಯ ಆನೆ 5155 ಕೆ.ಜಿ ತೂಕ ಹೊಂದಿದ್ದು, 2.80 ಮೀಟರ್ ಎತ್ತರವಿದೆ. ಇದಕ್ಕೆ ಮದವೇರಿರುವುದರಿಂದ ಒಂಟಿಯಾಗಿ ಕಟ್ಟಲಾಗಿದೆ. ಜತೆಗೆ ಈ ಆನೆಯ ಬಳಿ ಇದರ ಮಾವುತ ಭಾಸ್ಕರ್ ಹಾಗೂ ಕಾವಾಡ ರಾಜಣ್ಣ ಬಿಟ್ಟರೆ ಬೇರೆ ಯಾರೂ ಹತ್ತಿರ ಹೋಗದಂತೆ ಸೂಚನೆ ನೀಡಲಾಗಿದೆ.
ಕಳೆದ 6 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿರುವ ಈ ಧನಂಜಯ ಆನೆ ಕಾಡಾನೆ ಹಾಗೂ ಹುಲಿಗಳ ಸೆರೆ ಕಾರ್ಯಾಚರಣೆಯಲ್ಲೂ ಭಾಗವಹಿಸುತ್ತಿದೆ. ಧನಂಜಯ ಆನೆಯ ಮದ ಇಳಿಸುವ ಬಗ್ಗೆ ಹಿರಿಯ ಅರಣ್ಯ ಅಧಿಕಾರಿಗಳ ಸೂಚನೆಯನ್ನ ಪಡೆಯಲಾಗುತ್ತಿದೆ ಎಂದು ಮೂಲಗಳು ಖಚಿತಪಡಿಸಿವೆ.