ಮಂತ್ರಾಲಯದಲ್ಲಿ ಅದ್ಧೂರಿಯಾಗಿ ಜರುಗಿದ ಮೂಲ ರಾಮನ ಶೋಭಾಯಾತ್ರೆ: ವಿಡಿಯೋ
🎬 Watch Now: Feature Video
ರಾಯಚೂರು: ಅಯೋಧ್ಯೆಯ ರಾಮಮಂದಿರದಲ್ಲಿ ಬಾಲ ರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಶಾಸ್ತ್ರೋಕ್ತವಾಗಿ ನೆರವೇರಿದೆ. ಮತ್ತೊಂದೆಡೆ, ರಾಯಚೂರು ಸಮೀಪದ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿ ಮಠದಲ್ಲಿ, ಪೀಠಾಧಿಪತಿ ಸುಬುಧೇಂದ್ರ ತೀರ್ಥ ಶ್ರೀಗಳ ನೇತೃತ್ವದಲ್ಲಿ ಶೋಭಾಯಾತ್ರೆ ನಡೆಯಿತು. ರಾಯರ ಮಠದ ಮುಂಭಾಗದಲ್ಲಿ ಶೋಭಾಯಾತ್ರೆಗೆ ಪೀಠಾಧಿಪತಿಗಳು ಚಾಲನೆ ನೀಡುವ ವೇಳೆ ಮುಸ್ಲಿಂ ಬಾಂಧವರು ಕೇಸರಿ ಧ್ವಜ ಹಾರಿಸಿದರು. ಬಳಿಕ ಮುಸ್ಲಿಂ ಮುಖಂಡರು ಸಹ ಶೋಭಾಯಾತ್ರೆಯಲ್ಲಿ ಹೆಜ್ಜೆ ಹಾಕಿದರು. ಈ ಮೂಲಕ ಪೀಠಾಧಿಪತಿ ಸುಬುಧೇಂದ್ರ ತೀರ್ಥರು ಭಾವೈಕ್ಯತೆಯ ಸಂದೇಶ ರವಾನಿಸಿದರು.
ಮಂತ್ರಾಲಯದ ರಾಜಬೀದಿಗಳಲ್ಲಿ ಮೂಲ ರಾಮನ ಮೂರ್ತಿಯ ಭವ್ಯ ಮೆರವಣಿಗೆ ಸಾಗಿತು. ಬೃಹತ್ ಶೋಭಾಯಾತ್ರೆಯಿಂದ ರಾಯರಮಠ ಸಂಪೂರ್ಣವಾಗಿ ಕೇಸರಿಮಯವಾಗಿತ್ತು. ಶೋಭಾಯಾತ್ರೆಯಲ್ಲಿ ಭಾಗವಹಿಸಿದ ನೂರಾರು ಭಕ್ತರು ಕೇಸರಿ ಧ್ವಜಗಳನ್ನ ಹಿಡಿದು ರಾಜಬೀದಿಗಳಲ್ಲಿ ಹೆಜ್ಜೆ ಹಾಕಿ, ಕುಣಿದು - ಕುಪ್ಪಳಿಸಿ ಸಂಭ್ರಮಿಸಿದರು.
ಇದನ್ನೂ ಓದಿ: ಶತಮಾನದ ಕನಸು ನನಸಾಗುವ ಅಮೃತ ಘಳಿಗೆ: ಅಯೋಧ್ಯೆಗಾಗಿ 500 ವರ್ಷಗಳಲ್ಲಿ ನಡೆದಿದ್ದೇನು?
ಪ್ರಾಣ ಪ್ರತಿಷ್ಠಾಪನೆ ವಿಧಿವಿಧಾನಗಳನ್ನು ನೆರವೇರಿಸಿದ ಪ್ರಧಾನಿ ಮೋದಿ (ಉತ್ತರ ಪ್ರದೇಶ): ಅಯೋಧ್ಯೆ ರಾಮಮಂದಿರದ ಗರ್ಭಗುಡಿಯಲ್ಲಿರುವ ರಾಮಲಲ್ಲಾ ಪ್ರತಿಮೆಗೆ ಪ್ರಧಾನಿ ಮೋದಿ ಇಂದು ಪ್ರಾಣ ಪ್ರತಿಷ್ಠಾಪನೆ ವಿಧಿವಿಧಾನಗಳನ್ನು ನೆರವೇರಿಸಿದರು. ವೇದಘೋಷಗಳ ನಡುವೆ ಪೂಜಾದಿಗಳನ್ನು ನೆರವೇರಿಸಲಾಯಿತು. ಮಧ್ಯಾಹ್ನ 12.20ರಿಂದ 1ರ ನಡುವಿನ ಅಭಿಜಿತ್ ಲಗ್ನದಲ್ಲಿ ಪ್ರಾಣಪ್ರತಿಷ್ಠಾಪನೆ ಸಮಾರಂಭ ಜರುಗಿತು. ವಿದ್ವಾಂಸರ ಸಮ್ಮುಖದಲ್ಲಿ 51 ಇಂಚು ಎತ್ತರದ ರಾಮಲಲ್ಲಾ ಪ್ರತಿಮೆಯನ್ನು ಅನಾವರಣಗೊಳಿಸಲಾಯಿತು.