ಮಂಗಳೂರು: ವಿದ್ಯಾರ್ಥಿ ಮೇಲೆ ಹರಿದ ಶಾಲಾ ಬಸ್, ಬಾಲಕ ಪವಾಡಸದೃಶ ಪಾರು - VIDEO - ಶಾಲಾ ಬಸ್ ಅಪಘಾತ
🎬 Watch Now: Feature Video
Published : Feb 24, 2024, 6:29 PM IST
ಮಂಗಳೂರು: ಸ್ಕೂಲ್ ಬಸ್ ಡಿಕ್ಕಿ ಹೊಡೆದು, ಮೇಲೆ ಹರಿದರೂ ಶಾಲಾ ವಿದ್ಯಾರ್ಥಿಯೋರ್ವ ಪವಾಡ ಸದೃಶ ರೀತಿಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ವಿದ್ಯಾರ್ಥಿಗೆ ಸಣ್ಣ ಪುಟ್ಟ ಗಾಯವಾಗಿದೆ. ಮಂಗಳೂರಿನ ಹೊರವಲಯದ ಕುಳಾಯಿಯಲ್ಲಿ ಈ ಘಟನೆ ನಡೆದಿದೆ.
ಚಾಲನೆಯಲ್ಲಿದ್ದ ಸ್ಕೂಲ್ ಬಸ್ ಅಡಿಗೆ ವಿದ್ಯಾರ್ಥಿಯೊಬ್ಬನು ಬಿದ್ದು ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡ ಸದೃಶವೆಂಬಂತೆ ಪಾರಾಗಿರುವ ಘಟನೆ ಮಂಗಳೂರಿನ ಹೊರವಲಯದ ಕುಳಾಯಿಯಲ್ಲಿ ನಡೆದಿದೆ.
ಸುರತ್ಕಲ್ನ ಆಂಗ್ಲ ಮಾಧ್ಯಮ ಶಾಲೆಯ ಈ ವಿದ್ಯಾರ್ಥಿ ಸ್ಕೂಲ್ ಬಸ್ಸಿನಲ್ಲಿ ಆಗಮಿಸಿ ಮನೆ ಸಮೀಪದಲ್ಲಿ ಇಳಿದಿದ್ದಾನೆ. ಬಳಿಕ ಬಸ್ ಹೊರಡುತ್ತಿದ್ದಾಗಲೇ ಅದೇ ಬಸ್ ಮುಂಭಾಗದಲ್ಲೇ ಏಕಾಏಕಿ ದಾಟಿ ಮನೆಯತ್ತ ಹೋಗಲು ಯತ್ನಿಸಿದ್ದಾನೆ. ಈ ವೇಳೆ ವಿದ್ಯಾರ್ಥಿಗೆ ಬಸ್ ಡಿಕ್ಕಿ ಹೊಡೆದಿದ್ದರಿಂದ ಬಸ್ನಡಿ ಬಿದ್ದಿದ್ದಾನೆ.
ಇದನ್ನು ಗಮನಿಸಿದ ಅಲ್ಲೇ ಇದ್ದ ಮತ್ತೋರ್ವ ವಿದ್ಯಾರ್ಥಿ ಹಾಗೂ ಮಹಿಳೆ ಚೀರಾಡಿದ್ದಾರೆ. ಆಗ ತಕ್ಷಣ ಚಾಲಕ ಬಸ್ ನಿಲ್ಲಿಸಿದ್ದಾನೆ. ಪರಿಣಾಮ ಬಾಲಕ ಬಸ್ ನಡಿಗೆ ಬಿದ್ದರೂ ಪವಾಡ ಸದೃಶವೆಂಬಂತೆ ಸಣ್ಣಪುಟ್ಟ ಗಾಯದೊಂದಿಗೆ ಪಾರಾಗಿದ್ದಾನೆ. ಸ್ಕೂಲ್ ಬಸ್ನಲ್ಲಿ ನಿರ್ವಾಹಕ ಇರಲಿಲ್ಲ ಎಂದು ಹೇಳಲಾಗುತ್ತಿದೆ. ಚಾಲಕನ ವಿರುದ್ಧ ಸುರತ್ಕಲ್ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ರಣ ಭೀಕರ ದುರಂತ: ಗಂಗಾ ಸ್ನಾನಕ್ಕೆ ತೆರಳುತ್ತಿದ್ದ ಟ್ರ್ಯಾಕ್ಟರ್ ಪಲ್ಟಿ, 7 ಮಕ್ಕಳು ಸೇರಿ 15 ಜನರ ಸಾವು