ಸವದತ್ತಿ ಯಲ್ಲಮ್ಮದೇವಿ ಹುಂಡಿ ಎಣಿಕೆ: ಒಂದೂವರೆ ತಿಂಗಳಲ್ಲಿ ₹1.96 ಕೋಟಿ ಕಾಣಿಕೆ ಸಂಗ್ರಹ! - Savadatti Yallamma Devi

🎬 Watch Now: Feature Video

thumbnail

By ETV Bharat Karnataka Team

Published : Jul 26, 2024, 12:09 PM IST

ಬೆಳಗಾವಿ: ಉತ್ತರ ಕರ್ನಾಟಕದ ಶಕ್ತಿದೇವಿ ಸವದತ್ತಿಯ ಯಲ್ಲಮ್ಮನಗುಡ್ಡದ ಪ್ರಸಿದ್ಧ ಯಲ್ಲಮ್ಮ ದೇವಿ ದೇವಸ್ಥಾನದ ಹುಂಡಿ ಎಣಿಕೆ ಕಾರ್ಯ ಮುಕ್ತಾಯವಾಗಿದೆ. ಒಂದೂವರೆ ತಿಂಗಳ ಅವಧಿಯಲ್ಲಿ 1.96 ಕೋಟಿ ರೂಪಾಯಿ ಕಾಣಿಕೆ‌ ಸಂಗ್ರಹವಾಗಿದೆ.

ಏಪ್ರಿಲ್‌ 1ರಿಂದ ಮೇ 20ರ ಅವಧಿಯಲ್ಲಿ ಭಕ್ತರು ಒಪ್ಪಿಸಿರುವ ಕಾಣಿಕೆಯ ಎಣಿಕೆ ಕಾರ್ಯ ನಿನ್ನೆ ಮುಗಿಯಿತು. 1.71 ಕೋಟಿ ರೂ. ನಗದು, 20.44 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಹಾಗು 4.44 ಲಕ್ಷ ರೂ‌. ಮೌಲ್ಯದ ಬೆಳ್ಳಿ ಆಭರಣಗಳು ಇದರಲ್ಲಿ ಸೇರಿವೆ.

ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆಯ ಪರಿಣಾಮ ಯಲ್ಲಮ್ಮ ಗುಡ್ಡಕ್ಕೆ ಅಪಾರ ಸಂಖ್ಯೆಯ ಮಹಿಳಾ ಭಕ್ತರು ಭೇಟಿ ನೀಡುತ್ತಿದ್ದಾರೆ. ಪ್ರತಿವರ್ಷ ಈ ಅವಧಿಯಲ್ಲಿ ಹುಂಡಿ ಎಣಿಕೆ ನಡೆದಾಗ 1 ಕೋಟಿಯಿಂದ 1.5 ಕೋಟಿ ರೂ.ವರೆಗೆ ಕಾಣಿಕೆ ಸಂಗ್ರಹವಾಗುತ್ತಿತ್ತು. ಆದರೆ, ಈ ವರ್ಷ 46 ಲಕ್ಷಕ್ಕೂ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ.

ದೇವಸ್ಥಾನ ಕಾರ್ಯನಿರ್ವಾಹಕ ಅಧಿಕಾರಿ ಎಸ್​.ಪಿ.ಬಿ.ಮಹೇಶ ಪ್ರತಿಕ್ರಿಯಿಸಿ, "ಈ ಬಾರಿ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ. ಶಕ್ತಿ ಯೋಜನೆ ಜಾರಿಯಾದಾಗಿನಿಂದ ಮಹಿಳಾ ಭಕ್ತರ ಸಂಖ್ಯೆ ಹೆಚ್ಚಾಗಿದೆ. ಕಾಣಿಕೆ ಮೊತ್ತವನ್ನು ದೇವಸ್ಥಾನದಲ್ಲಿ ಮೂಲಭೂತ ಸೌಕರ್ಯ ಸೇರಿ ಮತ್ತಿತರ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುವುದು" ಎಂದು ತಿಳಿಸಿದರು.

ಇದನ್ನೂ ಓದಿ: ತಂದೆಯ ಅನಾರೋಗ್ಯ ಲೆಕ್ಕಿಸದೇ ಕಾರ್ಗಿಲ್ ಯುದ್ಧದಲ್ಲಿ ಭಾಗಿಯಾಗಿದ್ದ ಬೆಳಗಾವಿ ವೀರಯೋಧ - Kargil Vijay Diwas

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.