ಗೂಡ್ಸ್ ರೈಲಿಗೆ ಡಿಕ್ಕಿ ಹೊಡೆದ ಸಾಬರಮತಿ ಎಕ್ಸ್‌ಪ್ರೆಸ್: ಹಳಿತಪ್ಪಿದ ಇಂಜಿನ್, 4 ಬೋಗಿಗಳು - Train Accident
🎬 Watch Now: Feature Video
Published : Mar 18, 2024, 11:37 AM IST
ಅಜ್ಮೀರ್(ರಾಜಸ್ಥಾನ): ಅಜ್ಮೀರ್‌ಗೆ ಮುನ್ನ ಸಿಗುವ ಮದರ್ ನಿಲ್ದಾಣದಲ್ಲಿ ಕಳೆದ ರಾತ್ರಿ 1:04 ಸುಮಾರಿಗೆ ರೈಲು ಅಪಘಾತ ಸಂಭವಿಸಿದೆ. ನಿಲ್ದಾಣದಲ್ಲಿ ನಿಂತಿದ್ದ ಗೂಡ್ಸ್ ರೈಲಿಗೆ ಪ್ರಯಾಣಿಕರಿದ್ದ ಸಾಬರಮತಿ ಎಕ್ಸ್‌ಪ್ರೆಸ್ ರೈಲು ಹಿಂಬದಿಯಿಂದ ಡಿಕ್ಕಿ ಹೊಡೆದು ಹಳಿ ತಪ್ಪಿದೆ. ಇದರಿಂದ ಸಬರಮತಿ ರೈಲಿನ ಎಂಜಿನ್ ಮತ್ತು ನಾಲ್ಕು ಬೋಗಿಗಳು ಹಳಿ ತಪ್ಪಿವೆ. ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಹಾಯಕ್ಕಾಗಿ ಅಜ್ಮೀರ್ ರೈಲು ನಿಲ್ದಾಣದಲ್ಲಿ ಸಹಾಯ ಕೇಂದ್ರ ಸ್ಥಾಪಿಸಲಾಗಿದೆ.
12548 ಸಂಖ್ಯೆಯ ಸಬರಮತಿ-ಆಗ್ರಾ ಕ್ಯಾಂಟ್ ರೈಲು ಹಳಿ ತಪ್ಪಿದೆ ಎಂದು ಉತ್ತರ ಪಶ್ಚಿಮ ರೈಲ್ವೆ ವಲಯದ ಸಾರ್ವಜನಿಕ ಸಂಪರ್ಕ ಅಧಿಕಾರಿ ಶಶಿ ಕಿರಣ್ ತಿಳಿಸಿದರು.
ಘಟನೆಯಲ್ಲಿ ಯಾವುದೇ ಪ್ರಾಣ ಹಾನಿಯಾಗಿಲ್ಲ. ಕೆಲವು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ರೈಲ್ವೆ ಅಧಿಕಾರಿಗಳು ಅಪಘಾತ ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲಿಸಿದ್ದಾರೆ.
ಹಳಿಗಳನ್ನು ಸರಿಪಡಿಸುವ ಕಾಮಗಾರಿ ನಡೆಯುತ್ತಿದೆ. ಅಪಘಾತದ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಸಂಚರಿಸಬೇಕಿದ್ದ ಐದು ರೈಲುಗಳನ್ನು ರದ್ದುಗೊಳಿಸಲಾಗಿದೆ.
ರದ್ದಾದ ರೈಲುಗಳ ಮಾಹಿತಿ: ರೈಲು ಸಂಖ್ಯೆ- 12065 ಅಜ್ಮೀರ್- ದೆಹಲಿ-ಸರಾಯ್ ರೋಹಿಲ್ಲಾ, ರೈಲು ಸಂಖ್ಯೆ- 22987 ಅಜ್ಮೀರ್- ಆಗ್ರಾ ಫೋರ್ಟ್, ರೈಲು ಸಂಖ್ಯೆ- 09605 ಅಜ್ಮೀರ್- ಗಂಗಾಪುರ ನಗರ, ರೈಲು ಸಂಖ್ಯೆ- 09639 ಅಜ್ಮೀರ್-ರೇವಾರಿ ಮತ್ತು ರೈಲು ಸಂಖ್ಯೆ- 19735 ಜೈಪುರ ರೈಲುಗಳನ್ನು ರದ್ದುಗೊಳಿಸಲಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಮಾರ್ಗ ಬದಲಾವಣೆ: ರೈಲು ಸಂಖ್ಯೆ- 12915 ಸಾಬರಮತಿ, ದೆಹಲಿ ಹಾಗೂ ರೈಲು ಸಂಖ್ಯೆ- 17020 ಹೈದರಾಬಾದ್, ಹಿಸಾರ್ ರೈಲು ಸಂಚರಿಸುವ ಮಾರ್ಗ ಬದಲಾಯಿಸಲಾಗಿದೆ.
ಇದನ್ನೂ ಓದಿ: ಕಾರು-ಟ್ರ್ಯಾಕ್ಟರ್ ಮಧ್ಯೆ ಭೀಕರ ಅಪಘಾತ: ಮಕ್ಕಳು ಸೇರಿ 7 ಮಂದಿ ಸ್ಥಳದಲ್ಲೇ ಸಾವು