ದಾವಣಗೆರೆ: ಒಂದೆಡೆ ನೀರಿಗಾಗಿ ಹಾಹಾಕಾರ, ಇನ್ನೊಂದೆಡೆ ಪೈಪ್ ಒಡೆದು ರಸ್ತೆಗಳು ಜಲಾವೃತ - WATER WASTAGE

🎬 Watch Now: Feature Video

thumbnail

By ETV Bharat Karnataka Team

Published : Apr 13, 2024, 7:29 PM IST

ದಾವಣಗೆರೆ: ಸದ್ಯ ದಾವಣಗೆರೆ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ನೀರಿನ ಹಾಹಾಕಾರ ಎದುರಾಗಿದೆ.‌ ಕುಡಿಯುವ ನೀರಿಗಾಗಿ ಜನ ಟ್ಯಾಂಕರ್​ ಮೊರೆ ಹೋಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾಗಿರುವ ವಿಡಿಯೋ ವೈರಲ್ ಆಗಿದೆ. ದಾವಣಗೆರೆ ನಗರದ ದೇವರಾಜ್ ಅರಸ್ ಬಡಾವಣೆಯ ಎಸ್ಪಿ ಕಚೇರಿ ಮಾರ್ಗದಲ್ಲಿ ಈ ಘಟನೆ‌ ನಡೆದಿದೆ.

ನೀರಿನ ಪೈಪ್ ಒಡೆದ ಪರಿಣಾಮ ಎಸ್ಪಿ ಮತ್ತು ಆರ್​​ಟಿಓ ಕಚೇರಿಗಳ ರಸ್ತೆಗಳು ನೀರಿನಿಂದ‌ ಸಂಪೂರ್ಣವಾಗಿ ಜಲಾವೃತವಾಗಿದ್ದವು. ಈಜುಕೊಳದಂತಾಗಿದ್ದ ರಸ್ತೆಯಲ್ಲೇ ವಾಹನ ಸವಾರರು ಸಂಚರಿಸಲು ಪರದಾಡಿದರು. ಇನ್ನು ನೀರು ಪೋಲಾಗುತ್ತಿರುವುದನ್ನು ಗಮನಿಸಿದ ಸ್ಥಳೀಯರು ತಮ್ಮ ಮೊಬೈಲ್​​ನಲ್ಲಿ ವಿಡಿಯೋ ಸೆರೆ ಹಿಡಿದರು. ನೀರು ಪೋಲಾಗುತ್ತಿರುವ ಬಗ್ಗೆ ಮಹಾನಗರ ಪಾಲಿಕೆಯ ಅಧಿಕಾರಿಗಳ ಗಮನಕ್ಕೆ ತಂದರೂ ತಕ್ಷಣವೇ ಯಾವುದೇ ಪ್ರಯೋಜ‌ನ ಆಗಿಲ್ಲ ಎಂದು ಸ್ಥಳೀಯರು ಆರೋಪಿಸಿದರು. ಕೂಡಲೇ ನೀರನ್ನು ಬಂದ್ ಮಾಡುವ ಮೂಲಕ ಒಡೆದಿರುವ ಪೈಪ್​ಅನ್ನು ಸರಿಪಡಿಸಿ ಪೋಲಾಗುತ್ತಿರುವ ನೀರನ್ನು ಉಳಿಸಬೇಕೆಂದು ಒತ್ತಾಯಿಸಿದರು. ಬೇಸಿಗೆ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ನೀರಿನ ಅಭಾವ ಉಂಟಾಗಿದ್ದು, ಜನರು ಪರಿತಪಿಸುವಂತಾಗಿದೆ. ನೀರು ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯವಾಗಿದೆ. 

ಇದನ್ನೂ ಓದಿ: ಜಾತ್ರೆಗೆ ಬಂದ ಸಾವಿರಾರು ಗೋವುಗಳ ದಾಹ ತೀರಿಸಿದ ನಿರ್ಮಾಪಕ ಮಹೇಂದ್ರ ಮುನ್ನೋತ್ - Water supply to cows

ಇದನ್ನೂ ಓದಿ: ಬತ್ತಿದ ವರದಾ ನದಿಗೆ ಕೊಳವೆಬಾವಿಯಿಂದ ನೀರು ಹರಿಸುತ್ತಿರುವ ರೈತ - Borewell Water To River

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.