thumbnail

By ETV Bharat Karnataka Team

Published : Jan 26, 2024, 1:40 PM IST

Updated : Jan 26, 2024, 1:57 PM IST

ETV Bharat / Videos

ಬೆಂಗಳೂರಿನ ಮಾಣಿಕ್ ಷಾ ಮೈದಾನದಲ್ಲಿ ಗಣರಾಜ್ಯೋತ್ಸವ ಸಂಭ್ರಮ: ನೇರಪ್ರಸಾರ

ಬೆಂಗಳೂರು: ದೇಶದೆಲ್ಲೆಡೆ ಇಂದು 75ನೇ ಗಣರಾಜ್ಯೋತ್ಸವ ಆಚರಿಸಲಾಗುತ್ತಿದೆ. ಬೆಂಗಳೂರಿನ ಎಂ.ಜಿ.ರಸ್ತೆಯ ಮಾಣಿಕ್ ಶಾ ಪರೇಡ್‌ ಮೈದಾನದಲ್ಲೂ ಈ ನಿಟ್ಟಿನಲ್ಲಿ ಕಳೆದೊಂದು ವಾರದಿಂದ ಸಿದ್ಧತೆಗಳು ನಡೆದಿವೆ. ಮೈದಾನದ ಸುತ್ತ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದೆ. ಮುಖ್ಯ ಅತಿಥಿಯಾಗಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪಾಲ್ಗೊಂಡಿದ್ದರು. ಆಕರ್ಷಕ ಕವಾಯತು, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ನಗರದ ಎಲ್ಲಾ ವಿಭಾಗಗಳ 9 ಡಿಸಿಪಿ, 16 ಎಸಿಪಿ, 46 ಪಿಐ, 109 ಪಿಎಸ್ಐ, 97 ಎಎಸ್ಐ, 414 ಕಾನ್‌ಸ್ಟೆಬಲ್ ಸೇರಿ‌ ಒಟ್ಟು 575 ಮಂದಿ ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ಇದನ್ನು ಹೊರತುಪಡಿಸಿ 10 ಕೆಎಸ್ಆರ್​ಪಿ ತುಕಡಿಗಳು, 2 ಅಗ್ನಿಶಾಮಕ ವಾಹನಗಳು, 1 ಕ್ಷಿಪ್ರ ಕಾರ್ಯಾಚರಣೆ ಪಡೆಯನ್ನು (ಕ್ಯೂಆರ್​ಟಿ) ಕರ್ತವ್ಯಕ್ಕೆ ನಿಯೋಜಿಸಲಾಗಿದೆ. ಗರುಡ ಪಡೆಗಳೂ ಸನ್ನದ್ಧವಾಗಿವೆ. 

ಮೈದಾನದ ಸುತ್ತಮುತ್ತ ನಿಗಾ ವಹಿಸಲು 100 ಸಿಸಿಟಿವಿ ಕ್ಯಾಮರಾ ಅಳವಡಿಸಲಾಗಿದೆ‌. ಕಾರ್ಯಕ್ರಮಕ್ಕೆ‌ ಆಗಮಿಸುವವರ ತಪಾಸಣೆಗೆ 3 ಬ್ಯಾಗೆಜ್‌ ಸ್ಕ್ಯಾನರ್​, 20 ಡಿಎಫ್​ಎಂಡಿ, 40 ಹೆಚ್​ಹೆಚ್​ಎಂಡಿಗಳನ್ನು ಅಳವಡಿಸಲಾಗಿದೆ.

ಇದನ್ನೂ ಓದಿ: ಗಣರಾಜ್ಯೋತ್ಸವಕ್ಕೆ ಮಾಣಿಕ್ ಷಾ ​ಮೈದಾನದಲ್ಲಿ ಸಕಲ ಸಿದ್ಧತೆ; ಮೈದಾನದ ಸುತ್ತಮುತ್ತ ಪೊಲೀಸ್ ಬಂದೋಬಸ್ತ್

Last Updated : Jan 26, 2024, 1:57 PM IST

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.