ಕಾನ್​​ಸ್ಟೇಬಲ್​ಗೆ ಡಿಕ್ಕಿ ಹೊಡೆದ ರಕ್ತಚಂದನ ಕಳ್ಳಸಾಗಣೆದಾರರ ವಾಹನ: ಪೊಲೀಸ್​ ಸಾವು

🎬 Watch Now: Feature Video

thumbnail

ಅಣ್ಣಮೈಯಾ (ಆಂಧ್ರಪ್ರದೇಶ): ರಕ್ಷಣಾ ಕಾರ್ಯಾಚರಣೆಯಲ್ಲಿದ್ದ ಪೊಲೀಸ್ ಕಾನ್​​ಸ್ಟೇಬಲ್​ವೋರ್ವರು​​ ಮೃತಪಟ್ಟ ಘಟನೆ ಆಂಧ್ರ ಪ್ರದೇಶದಲ್ಲಿ ನಡೆದಿದೆ. ಅಣ್ಣಮೈಯಾ ಜಿಲ್ಲೆಯಲ್ಲಿ ರಕ್ತಚಂದನ ಸಾಗಣೆದಾರರು ಪೊಲೀಸ್​ ಕಾನ್​ಸ್ಟೇಬಲ್ ಸಾವಿಗೆ ಕಾರಣರಾಗಿದ್ದಾರೆ. ವಾಹನ ಡಿಕ್ಕಿ ಹೊಡೆದ ಪರಿಣಾಮ ಕರ್ತವ್ಯದಲ್ಲಿದ್ದ ಕಾನ್​​ಸ್ಟೇಬಲ್ ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿ ತಪಾಸಣೆ ವೇಳೆ ಈ ಘಟನೆ ನಡೆದಿದೆ.  

ಕೆ.ವಿ ಪಲ್ಲಿ ಮಂಡಲದ ಚಿನಪಲ್ಲಿಯಲ್ಲಿ ಕೆಂಪು ಚಂದನದ ಕಳ್ಳಸಾಗಣೆ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಕೂಡಲೇ ಫೀಲ್ಡಿಗಿಳಿದ ಪೊಲೀಸರು ಸುಂಡುಪಲ್ಲಿ ಗಡಿಭಾಗದ ಗೊಲ್ಲಪಲ್ಲಿ ಬಳಿ ಕಾರ್ಯಾಚರಣೆಗಿಳಿದಿದ್ದಾರೆ. 

ಕಾನ್​​ಸ್ಟೇಬಲ್ ಗಣೇಶ್ ಅವರು ರಕ್ತ ಚಂದನ ಸಾಗಿಸುತ್ತಿದ್ದ ವಾಹನವನ್ನು ತಡೆಯಲು ಯತ್ನಿಸಿದ್ದಾರೆ. ಆದ್ರೆ ಕಿಡಿಗೇಡಿಗಳು ಕಾನ್​​ಸ್ಟೇಬಲ್​ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ಅವರನ್ನು ಪಿಲೇರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮೃತಪಟ್ಟಿದ್ದಾರೆ. ಪೊಲೀಸರು ತಪಾಸಣೆ ಮುಂದುವರಿಸಿ, ರಕ್ತಚಂದನ ಕಳ್ಳಸಾಗಣೆದಾರರ ವಾಹನ ಸೇರಿದಂತೆ ಇಬ್ಬರನ್ನು ಬಂಧಿಸಿದ್ದಾರೆ.  

ಇದನ್ನೂ ಓದಿ: 'ನಿತ್ಯ 290 ದಶಲಕ್ಷ ಲೀಟರ್ ನೀರಿಗೆ ಬೇಡಿಕೆ, ಕೈಗಾರಿಕಾ ಪ್ರದೇಶಗಳಿಗೆ ನೀರು ಪೂರೈಸಲು ತ್ವರಿತ ಕ್ರಮಕ್ಕೆ ಸೂಚನೆ'

ಇದನ್ನೂ ಓದಿ: ಚಿಲಿ ಕಾಳ್ಗಿಚ್ಚು: ಸಾವಿನ ಸಂಖ್ಯೆ 123ಕ್ಕೆ ಏರಿಕೆ; ಹೃದಯವಿದ್ರಾವಕ ಘಟನೆಯ ಫೋಟೋಗಳಿವು

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.