ಬಂಡೀಪುರದಲ್ಲಿ ಅಪರೂಪದ ಬೇಟೆ: ಕೆರೆಯಲ್ಲಿ ಕರಡಿ ಹಿಡಿದ ಹುಲಿರಾಯ - Bandipur Protected Area

🎬 Watch Now: Feature Video

thumbnail

By ETV Bharat Karnataka Team

Published : Jan 25, 2024, 7:07 PM IST

ಚಾಮರಾಜನಗರ: ಗುಂಡ್ಲುಪೇಟೆ ತಾಲೂಕಿನ ಬಂಡೀಪುರದ ಸಂರಕ್ಷಿತ ಪ್ರದೇಶದಲ್ಲಿ ಹುಲಿಯೊಂದು ಕರಡಿಯನ್ನು ಸೆರೆ ಹಿಡಿದಿದೆ. ಈ ಅಪರೂಪದ ಬೇಟೆಯ ದೃಶ್ಯ ಮೊಬೈಲ್​​ನಲ್ಲಿ ಸೆರೆಯಾಗಿದೆ. ಬಂಡೀಪುರ ಸಫಾರಿ ರಸ್ತೆಯಲ್ಲಿ ಘಟನೆ ನಡೆದಿದ್ದು, ಈಟಿವಿ ಭಾರತಕ್ಕೆ ಈ ವಿಡಿಯೋ ಲಭ್ಯವಾಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬಂಡೀಪುರ ಸಿಎಫ್ಒ ರಮೇಶ್ ಕುಮಾರ್, ಮೊಬೈಲ್​​ನಲ್ಲಿ ಸೆರೆಯಾಗಿರುವ ದೃಶ್ಯ ಬಂಡೀಪುರದ್ದು ಎಂದು ಖಚಿತಪಡಿಸಿದ್ದಾರೆ. ಕರಡಿಯೂ ಕೂಡ ಬಲಿಷ್ಠ ಪ್ರಾಣಿಯಾಗಿದ್ದು, ಹಲವು ಸಂದರ್ಭಗಳಲ್ಲಿ ಹುಲಿಯನ್ನು ಕರಡಿ ಎದುರಿಸಿ ಕಾಲ್ಕೀಳುವಂತೆ ಮಾಡಿದ ನಿದರ್ಶನಗಳಿವೆ. ಅಂತಹದರಲ್ಲಿ ಕೆರೆಯೊಂದರಲ್ಲಿ ಕರಡಿ ಕತ್ತು ಹಿಡಿದ ಹುಲಿ ಬೇಟೆಯಾಡಿದ್ದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ. 

ಇದನ್ನೂ ಓದಿ: ಹುಲಿ‌ ದಾಳಿಯಿಂದ ಪಾರಾದ ಕಾಡೆಮ್ಮೆ: ಬಂಡೀಪುರ ಸಫಾರಿ ವಿಡಿಯೋ ವೈರಲ್

ಇತ್ತೀಚೆಷ್ಟೇ ಹುಲಿರಾಯನ ಬೇಟೆಯಿಂದ ಕಾಡೆಮ್ಮೆಯೊಂದು ಜಸ್ಟ್ ಮಿಸ್ ಆಗಿ ಪ್ರಾಣ ಉಳಿಸಿಕೊಂಡಿತ್ತು. ಈ ಬೇಟೆಯ ದೃಶ್ಯ ಕೂಡ ಮೊಬೈಲ್​ನಲ್ಲಿ ಸೆರೆಯಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಕೂಡ ಆಗಿತ್ತು. ತನ್ನ ಮೇಲೆ ಹುಲಿ ದಾಳಿ ಮಾಡಲು ಮುಂದಾಗುವುದನ್ನು ಗಮನಿಸಿದ ಕಾಡೆಮ್ಮೆ ಮಿಂಚಿನಂತೆ ಓಡಿ ಹುಲಿ ಬಾಯಿಂದ ಪಾರಾಗಿತ್ತು. ಕೆಲವೇ ಮೀಟರ್ ಅಟ್ಟಾಡಿಸಿದ್ದ ಹುಲಿ, ಬಂದ ದಾರಿಗೆ ಸುಂಕ‌ ಇಲ್ಲದಂತೆ ವಾಪಸ್​ ಆಗಿದ್ದು, ಹುಲಿಯ ಚೇಸಿಂಗ್ ದೃಶ್ಯವನ್ನು ಸಫಾರಿಗರು ಸೆರೆ ಹಿಡಿದು ಪುಳಕಿತರಾಗಿದ್ದರು. 

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.