ಮಹಿಳೆ ಮೇಲೆ ರ‍್ಯಾಪಿಡೋ ಆಟೋ ಚಾಲಕನಿಂದ ಹಲ್ಲೆ: ಕೃತ್ಯ ಸಿಸಿಟಿವಿಯಲ್ಲಿ ಸೆರೆ - auto driver

🎬 Watch Now: Feature Video

thumbnail

By ETV Bharat Karnataka Team

Published : Jan 21, 2024, 3:29 PM IST

ಬೆಂಗಳೂರು: ಮಹಿಳಾ ಪ್ರಯಾಣಿಕರೊಬ್ಬರನ್ನು ಆಟೋ ಚಾಲಕ ರಸ್ತೆಯಲ್ಲಿ ಹಿಡಿದು ಎಳೆದಾಡಿ ಹಲ್ಲೆ ಮಾಡಿರುವ ಘಟನೆ ನಗರದಲ್ಲಿ ನಡೆದಿದೆ. ಶನಿವಾರ ಬೆಳಗ್ಗೆ ಬೆಳ್ಳಂದೂರಿನ ಗ್ರೀನ್ ಗ್ಲೆನ್ ಲೇಔಟ್‌ನಲ್ಲಿ ಆಟೋ ಬುಕ್ಕಿಂಗ್ ರದ್ದು ಮಾಡಿದ್ದಕ್ಕೆ ಸಿಟ್ಟಿಗೆದ್ದ ಚಾಲಕ, ಮಹಿಳೆ ಮೇಲೆ ಹಲ್ಲೆ ಮಾಡಿದ್ದಾನೆ.

ಬೆಳಗ್ಗೆ 8:30 ರ ಸುಮಾರಿಗೆ ಬೆಳ್ಳಂದೂರಿನ ಗ್ರೀನ್ ಗ್ಲೆನ್ ಲೇಔಟಿನಿಂದ ವೈಟ್‌ಫೀಲ್ಡ್​ನ ತುಬರಹಳ್ಳಿಗೆ ತೆರಳಲು ಮಹಿಳೆ ರ‍್ಯಾಪಿಡೋ ಆಟೋ ಬುಕ್ ಮಾಡಿದ್ದರು. ಕಾರಣಾಂತರಗಳಿಂದ ನಂತರ ಬುಕ್ಕಿಂಗ್ ಕ್ಯಾನ್ಸಲ್ ಮಾಡಿದ್ದಾರೆ. ಅಷ್ಟರಲ್ಲಿ ಸ್ಥಳಕ್ಕೆ ಬಂದಿದ್ದ ಆಟೋ ಚಾಲಕ ಮಹಿಳೆಯೊಂದಿಗೆ ಗಲಾಟೆ ಮಾಡಿ, ಅವಾಚ್ಯ ಪದಗಳಿಂದ ನಿಂದಿಸಿ ರಸ್ತೆಯಲ್ಲಿ ಎಳೆದಾಡಿ ಹಲ್ಲೆ ಮಾಡಿದ್ದಾನೆ. ಘಟನೆಯ ಸಂಪೂರ್ಣ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹಲ್ಲೆಗೊಳಗಾದ ಮಹಿಳೆಯ ಸ್ನೇಹಿತರೊಬ್ಬರು ಸಿಸಿಟಿವಿ ದೃಶ್ಯಸಮೇತ ಘಟನೆಯ ವಿವರವನ್ನು ಸಾಮಾಜಿಕ ಜಾಲತಾಣ ಎಕ್ಸ್ ಆ್ಯಪ್‌ನಲ್ಲಿ ಹಂಚಿಕೊಂಡಿದ್ದಾರೆ. ಈ ಕುರಿತು ವಿವರ ಪಡೆದುಕೊಂಡಿರುವ ಪೊಲೀಸರು ಆರೋಪಿ ಆಟೋ ಚಾಲಕನಿಗಾಗಿ ಶೋಧ ಆರಂಭಿಸಿದ್ದಾರೆ.      

ಇದನ್ನೂ ಓದಿ : ಬೆಂಗಳೂರು: ಸೆಲೂನ್ ಶಾಪ್​ಗೆ‌ ನುಗ್ಗಿ ಯುವಕನಿಗೆ ರೇಸರ್​ ನಿಂದ ಇರಿದು ಮಾರಣಾಂತಿಕ ಹಲ್ಲೆ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.