ನಟ ರಾಮ್ ಚರಣ್ ಜನ್ಮದಿನ: ಪತ್ನಿ, ಪುತ್ರಿಯೊಂದಿಗೆ ತಿರುಪತಿ ದೇಗುಲಕ್ಕೆ ಭೇಟಿ - Ram Charan - RAM CHARAN
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/27-03-2024/640-480-21081383-thumbnail-16x9-newsss.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Mar 27, 2024, 12:37 PM IST
ತಿರುಪತಿ(ಆಂಧ್ರಪ್ರದೇಶ): ದಕ್ಷಿಣ ಚಿತ್ರರಂಗದ ಜನಪ್ರಿಯ ನಟ ರಾಮ್ ಚರಣ್ ಅವರಿಗಿಂದು 39ನೇ ಹುಟ್ಟುಹಬ್ಬದ ಸಂಭ್ರಮ. ಕುಟುಂಬಸ್ಥರು, ಸಿನಿಮಾ ಕ್ಷೇತ್ರದ ಸ್ನೇಹಿತರೂ ಸೇರಿದಂತೆ ಅಪಾರ ಸಂಖ್ಯೆಯ ಅಭಿಮಾನಿಗಳು ಶುಭ ಕೋರುತ್ತಿದ್ದಾರೆ. ಇದೇ ಸಂದರ್ಭದಲ್ಲಿ ರಾಮ್ ಚರಣ್ ತಿರುಪತಿ ದೇಗುಲಕ್ಕೆ ಕುಟುಂಬಸಮೇತ ಭೇಟಿ ನೀಡಿ ವೆಂಕಟೇಶ್ವರನ ದರ್ಶನ ಪಡೆದಿದ್ದಾರೆ.
'ಆರ್ಆರ್ಆರ್' ಖ್ಯಾತಿಯ ರಾಮ್ ಚರಣ್ ಜೊತೆ ಪತ್ನಿ ಉಪಾಸನಾ ಕಾಮಿನೇನಿ, ಮಗಳು ಕ್ಲಿನ್ ಕಾರಾ ಕೊನಿಡೇಲಾ ಇದ್ದರು. ಉಪಾಸನಾ ಅವರ ತಾಯಿ ಶೋಬನಾ ಕಾಮಿನೇನಿ ಸೇರಿದಂತೆ ಇತರೆ ಕುಟುಂಬ ಸದಸ್ಯರೂ ಜೊತೆಗಿದ್ದರು. ದಕ್ಷಿಣ ಭಾರತದ ಪವರ್‌ಫುಲ್ ಕಪಲ್ ಸಂಪೂರ್ಣ ಸಾಂಪ್ರದಾಯಿಕ ನೋಟದಲ್ಲಿ ಕಾಣಿಸಿಕೊಂಡರು.
ರಾಮ್ ಚರಣ್ ತಮ್ಮ 39ನೇ ಜನ್ಮದಿನಾಚರಣೆಯನ್ನು ವೆಂಕಟೇಶ್ವರ ಸ್ವಾಮಿಯ ದರ್ಶನದೊಂದಿಗೆ ಪ್ರಾರಂಭಿಸಿದ್ದಾರೆ. ತಿರುಪತಿ ದೇವಸ್ಥಾನದಿಂದ ರಾಮ್ ಚರಣ್ ಕುಟುಂಬದ ವಿಡಿಯೋ ಹೊರಬಿದ್ದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಜಾಗ ಗಿಟ್ಟಿಸಿಕೊಂಡಿದೆ. ದೇವಸ್ಥಾನದಿಂದ ಹೊರಡುವಾಗ ದಂಪತಿ ಕ್ಯಾಮರಾಗಳಿಗೆ ಪೋಸ್ ಕೊಟ್ಟರು. ಆದರೆ ಎಂದಿನಂತೆ ಪುತ್ರಿ ಕ್ಲಿನ್ ಕಾರಾ ಕೊನಿಡೇಲಾರ ಮುಖ ಕಾಣದಂತೆ ನೋಡಿಕೊಂಡಿದ್ದಾರೆ.
ಇದನ್ನೂ ಓದಿ: 'ರಾಮಾಯಣ'ಕ್ಕಾಗಿ ಆರ್ಚರಿ ಕಲಿಯುತ್ತಿರುವ ರಣ್ಬೀರ್ ಕಪೂರ್: ತರಬೇತುದಾರರೊಂದಿಗಿನ ಫೋಟೋ ವೈರಲ್ - Ramayan