ಲೋಕಸಭೆಯ ಅಧಿವೇಶನ ಆರಂಭ: ನೇರ ಪ್ರಸಾರ - Monsoon Session - MONSOON SESSION
🎬 Watch Now: Feature Video
Published : Aug 1, 2024, 11:50 AM IST
|Updated : Aug 1, 2024, 9:21 PM IST
ನವದೆಹಲಿ: ಲೋಕಸಭೆ ಅಧಿವೇಶನ ಆರಂಭವಾಗಿದ್ದು, ಅದರ ನೇರ ಪ್ರಸಾರ ಹೀಗಿದೆ. ಕೇಂದ್ರದಲ್ಲಿ ಹೊಸ ಸರ್ಕಾರ ರಚನೆಯಾದ ನಂತರ 18ನೇ ಲೋಕಸಭೆಯ ಮೊದಲ ಅಧಿವೇಶನ ಇದಾಗಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಸತತ ಮೂರನೇ ಅವಧಿಯ ಮೊದಲ ಪೂರ್ಣಾವಧಿ ಬಜೆಟ್ ಅನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸಂಸತ್ತಿನಲ್ಲಿ ಇತ್ತೀಚೆಗೆ ಮಂಡಿಸಿದರು. ಸೀತಾರಾಮನ್ ಅವರು ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳ ವಿರುದ್ಧ ತಾರತಮ್ಯ ಮಾಡಲಾಗಿದೆ ಎಂದು ಇಂಡಿಯಾ ಒಕ್ಕೂಟ ಆರೋಪಿಸಿ ಸದನಲ್ಲಿ ಪ್ರತಿಭಟನೆ ಕೂಡ ಮಾಡಿತು. ಸಂಸತ್ತಿನ ಮಕರ ದ್ವಾರದ ಮೆಟ್ಟಿಲುಗಳ ಮೇಲೆ ನಡೆದ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಹಿರಿಯ ನಾಯಕರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಪಕ್ಷದ ಹಲವು ಸಂಸದರು ಮತ್ತು ಟಿಎಂಸಿ, ಸಮಾಜವಾದಿ ಪಕ್ಷ, ಡಿಎಂಕೆ ಮತ್ತು ಎಡಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು. ನಮಗೆ ಭಾರತ ಬಜೆಟ್ ಬೇಕು, ಎನ್‌ಡಿಎ ಬಜೆಟ್ ಅಲ್ಲ' ಮತ್ತು 'ಬಜೆಟ್‌ನಲ್ಲಿ ಭಾರತಕ್ಕೆ ಎನ್‌ಡಿಎ ದ್ರೋಹ ಬಗೆದಿದೆ ಎಂಬ ಫಲಕಗಳನ್ನು ಹಿಡಿದು ಸಂಸದರು ಆಕ್ರೋಶ ವ್ಯಕ್ತಪಡಿಸಿದರು.
Last Updated : Aug 1, 2024, 9:21 PM IST