ಸಮುದ್ರಕ್ಕೆ ಧುಮುಕಿ ಶವಾಸನ ಮಾಡಿದ ಸಚಿವ ಮಂಕಾಳ ವೈದ್ಯ: ವಿಡಿಯೋ ನೋಡಿ - Minster Mankala Vaidya
🎬 Watch Now: Feature Video
Published : Mar 10, 2024, 12:29 PM IST
ಭಟ್ಕಳ(ಉತ್ತರ ಕನ್ನಡ): ಮೀನುಗಾರಿಕೆ, ಬಂದರು, ಒಳನಾಡು ಜಲಸಾರಿಗೆ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಭಟ್ಕಳ ತಾಲೂಕಿನ ಬೆಳಕೆಯಲ್ಲಿ ಕೃತಕ ಬಂಡೆಗಳ ಸ್ಥಾಪನೆಗೆ ಚಾಲನೆ ನೀಡಿದ್ದಾರೆ. ಇದೇ ವೇಳೆ ಸಮುದ್ರಕ್ಕೆ ಧುಮುಕಿ ಶವಾಸನ ಮಾಡಿ ಗಮನ ಸೆಳೆದಿದ್ದಾರೆ.
ಮೀನುಗಳ ಉತ್ಪತ್ತಿಗೆ ಪೂರಕವಾಗಿ ಉತ್ತರ ಕನ್ನಡ ಮತ್ತು ಉಡುಪಿ ಜಿಲ್ಲಾ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ ಕೃತಕ ಬಂಡೆಗಳನ್ನು ಸ್ಥಾಪಿಸುವ ಯೋಜನೆ ಇದಾಗಿದೆ. ಈ ಬಗ್ಗೆ ಮಾತನಾಡಿದ ಸಚಿವರು, ಯೋಜನೆಗೆ ಚಾಲನೆ ನೀಡಿ ಖುಷಿಯಾಯ್ತು. ಹೀಗಾಗಿ ಸಮುದ್ರಕ್ಕೆ ಧುಮುಕಿ ಈಜಾಡಿದ್ದೇನೆ. ಚಿಕ್ಕವನಿದ್ದಾಗಲೇ ಈಜು ಕಲಿತಿದ್ದೆ. ಇತ್ತೀಚಿನ ವರ್ಷಗಳಲ್ಲಿ ಎಲ್ಲಿಯೂ ಈಜಲು ಸಾಧ್ಯವಾಗಿರಲಿಲ್ಲ. ಈಜು ಆರೋಗ್ಯಕ್ಕೆ ಒಳ್ಳೆಯದು. ಎಲ್ಲರೂ ಈಜುವುದನ್ನು ಕಲಿಯಿರಿ ಎಂದು ಸಲಹೆ ನೀಡಿದರು.
ಇದನ್ನೂ ಓದಿ: ಸಿದ್ದಗಂಗಾ ಮಠದಲ್ಲಿ ವೈಭವದ ರಥೋತ್ಸವ: ಸಿಎಂ ಸಿದ್ದರಾಮಯ್ಯಗಾಗಿ ಹೊತ್ತಿದ್ದ ಹರಕೆ ತೀರಿಸಿದ ಭಕ್ತ
ಒಟ್ಟಿನಲ್ಲಿ ಮೀನುಗಾರರಿಗೆ ಅನುಕೂಲವಾಗುವ ಯೋಜನೆಗೆ ಚಾಲನೆ ನೀಡಿದ ಖುಷಿಯಲ್ಲಿ ಸಚಿವರು ಸಮುದ್ರಕ್ಕೆ ಹಾರಿ ಈಜು ಹೊಡೆದು ಆನಂದಿಸಿದ್ದಾರೆ. ಯಾವುದೇ ಸುರಕ್ಷಾ ವಿಧಾನ ಇಲ್ಲದೇ ಧುಮಕಿ ಸಾಹಸ ಪ್ರದರ್ಶಸಿ, ಅಧಿಕಾರಿಗಳ ಹಾಗೂ ಮೀನುಗಾರರ ಹುಬ್ಬೇರಿಸಿದ್ದಾರೆ.