ತಿಂಗಳಲ್ಲಿ ನಾಲ್ವರನ್ನು ಬಲಿ ಪಡೆದ ಒಂಟಿ ಸಲಗ: ರಾತ್ರಿ ಹೊರ ಬರಲು ಹೆದರುತ್ತಿರುವ ಜನರು! - man died in elephant attack
🎬 Watch Now: Feature Video
Published : Sep 5, 2024, 7:53 PM IST
ಛತ್ತೀಸ್ಗಢ: ಒಂಟಿ ಸಲಗವೊಂದು ಮನುಷ್ಯರ ಮೇಲೆ ದಾಳಿ ನಡೆಸುತ್ತಿದ್ದು, ಈವರೆಗೂ ನಾಲ್ವರನ್ನು ಕೊಂದು ಹಾಕಿದೆ. ಕೊರ್ಬ ಜಿಲ್ಲೆಯ ಪಾಲಿ ಉಪ ಅರಣ್ಯ ವ್ಯಾಪ್ತಿಯ ತಾಡಪಾಖಾನ ಗ್ರಾಮದ ಅರಣ್ಯದಲ್ಲಿ ಕಳೆದ 4 ದಿನಗಳಿಂದ ಆನೆ ಬೀಡುಬಿಟ್ಟಿದೆ. ನಿನ್ನೆ ತಡರಾತ್ರಿ ಗ್ರಾಮಸ್ಥರೊಬ್ಬರನ್ನು ತುಳಿದು ಕೊಂದು ಹಾಕಿದೆ.
ಡಿಎಫ್‌ಒ ಕುಮಾರ್ ನಿಶಾಂತ್ ಮಾತನಾಡಿ, ಮನೆಯ ಹಿಂದಿನ ತೋಟಕ್ಕೆ ಹೋಗಿದ್ದಾಗ, ಅಟ್ಟಿಸಿಕೊಂಡು ಬಂದ ಆನೆಯು ವ್ಯಕ್ತಿಯನ್ನು ತುಳಿದು ಕೊಂದಿದೆ. ಇದಕ್ಕೂ ಮೊದಲು ಮೂಡಭಟ ಗ್ರಾಮದಲ್ಲಿ ಗೂಳಿಯೊಂದರ ಮೇಲೆ ದಾಳಿ ನಡೆಸಿ ಕೊಂದು ಹಾಕಿದೆ. ಆನೆಯನ್ನು ಕಾಡಿನೊಳಗೆ ಓಡಿಸುವ ಪ್ರಯತ್ನ ನಡೆಯುತ್ತಿದೆ. ಜನರು ಎಚ್ಚರಿಕೆ ವಹಿಸಬೇಕು ಎಂದು ಹೇಳಿದ್ದಾರೆ.
ಮೃತನ ಸಾವಿನ ಬಗ್ಗೆ ಮಾಹಿತಿ ದೊರೆತ ತಕ್ಷಣ ಅರಣ್ಯ ಮತ್ತು ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಮೃತರ ಕುಟುಂಬಕ್ಕೆ ತಕ್ಷಣದ ಪರಿಹಾರ ಮೊತ್ತ 25 ಸಾವಿರ ರೂಪಾಯಿ ನೀಡಲಾಗಿದೆ. ಸರ್ಕಾರದಿಂದ 5.75 ಲಕ್ಷ ರೂ.ಗಳನ್ನು ನೀಡಲಾಗುವುದು. ಆನೆಯ ಚಲನವಲನಗಳ ಮೇಲೆ ನಿಗಾ ಇರಿಸಲಾಗಿದೆ ಎಂದು ತಿಳಿಸಿದ್ದಾರೆ.
ಕಳೆದ ಒಂದು ತಿಂಗಳಲ್ಲಿ ಈ ಆನೆ ನಾಲ್ವರನ್ನು ಬಲಿ ಪಡೆದಿದೆ. ಮನೆಯ ಹೊರಗೆ ಕಟ್ಟಿಹಾಕಿದ್ದ ಎರಡು ಹೋರಿಗಳ ಮೇಲೆ ದಾಳಿ ಮಾಡಿದ್ದು, ಒಂದು ಗೂಳಿ ಸ್ಥಳದಲ್ಲೇ ಸಾವನ್ನಪ್ಪಿದೆ. ಮತ್ತೊಂದು ಗಾಯಗೊಂಡಿದ್ದು, ಪಶುವೈದ್ಯರು ಚಿಕಿತ್ಸೆ ನೀಡುತ್ತಿದ್ದಾರೆ. ಜನವಸತಿ ಪ್ರದೇಶಕ್ಕೆ ಬಂದಿರುವ ಕಾಡಾನೆಯು ಜನರ ಪ್ರಾಣ ತೆಗೆಯುತ್ತಿರುವುದು ಗ್ರಾಮಸ್ಥರಲ್ಲಿ ಭೀತಿ ಮೂಡಿಸಿದೆ.
ಆನೆಯ ದಾಳಿಯನ್ನು ತಪ್ಪಿಸಲು ಮತ್ತು ಎಚ್ಚರಿಕೆ ವಹಿಸಲು ಸುತ್ತಮುತ್ತಲ ಗ್ರಾಮಗಳಲ್ಲಿ ಡಂಗುರ ಸಾರಲಾಗಿದೆ. ಜನರು ರಾತ್ರಿ ಹೊತ್ತಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ. ರೈತರ ಹೊಲಗಳಲ್ಲಿ ಬೆಳೆದ ಬೆಳೆಗಳನ್ನೂ ಹಾನಿ ಮಾಡಿದೆ.
ಇದನ್ನೂ ಓದಿ: ರೈಲ್ವೆ ಬ್ಯಾರಿಕೇಡ್ನಲ್ಲಿ ಸಿಲುಕಿದ ಸಲಗ: ಒದ್ದಾಡುತ್ತಿದ್ದ ಆನೆ ಕೊನೆಗೂ ಬಚಾವ್- ವಿಡಿಯೋ - elephant rescue