ಮೈಸೂರು: ಹುಲಿಯ ಚಲನವಲನ ವೀಕ್ಷಣೆಗೆ ಹಾಕಿದ್ದ ಸಿಸಿಟಿವಿಯಲ್ಲಿ ಚಿರತೆ ಪ್ರತ್ಯಕ್ಷ - ವಿಡಿಯೋ - ಅರಣ್ಯ ಇಲಾಖೆ ಸಿಬ್ಬಂದಿ
🎬 Watch Now: Feature Video


Published : Feb 7, 2024, 4:12 PM IST
ಮೈಸೂರು : ಇಲ್ಲಿನ ದೊಡ್ಡ ಕಾನ್ಯಾ ಗ್ರಾಮದಲ್ಲಿ ಹುಲಿಗಳು ಓಡಾಡುತ್ತಿವೆ ಎಂದು ಸ್ಥಳೀಯರು ಮಾಹಿತಿ ನೀಡಿದ ಹಿನ್ನೆಲೆ ಅವುಗಳ ಚಲನವಲನ ಗಮನಿಸಲು ಅರಣ್ಯ ಇಲಾಖೆ ಸಿಸಿಟಿವಿ ಅಳವಡಿಸಿದೆ. ಆದ್ರೆ ಈ ಸಿಸಿಟಿವಿಯಲ್ಲಿ ಹುಲಿಗಳ ಬದಲಾಗಿ ಚಿರತೆ ಓಡಾಟ ಕಂಡುಬಂದಿದೆ. ಹೀಗಾಗಿ ಈ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಮೈಸೂರು ಸಮೀಪದ ಜಯಪುರ ಹೋಬಳಿಯ ದೊಡ್ಡ ಕಾನ್ಯಾ ಗ್ರಾಮದ ಬಳಿ ಕಳೆದ ಮಂಗಳವಾರ ಎರಡು ಹುಲಿಗಳು ಓಡಾಟ ನಡೆಸಿವೆ ಎಂಬ ಮಾಹಿತಿಯನ್ನು ಗ್ರಾಮಸ್ಥರು ಅರಣ್ಯ ಇಲಾಖೆಗೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆಯವರು ಗ್ರಾಮಕ್ಕೆ ಆಗಮಿಸಿ ಸ್ಥಳ ಪರಿಶೀಲನೆ ನಡೆಸಿದ್ದರು. ಬಳಿಕ ಗ್ರಾಮಸ್ಥರ ಮಾಹಿತಿಯ ಆಧಾರದ ಮೇಲೆ ಹುಲಿ ಓಡಾಡುತ್ತಿವೆ ಎಂಬ ಸ್ಥಳದಲ್ಲಿ ಸಿಸಿಟಿವಿಯನ್ನ ಅಳವಡಿಸಿದ್ದರು.
ಇದೀಗ ಸಿಸಿಟಿವಿ ಅಳವಡಿಸಿರುವ ತೋಟದ ಮನೆಯ ಮುಂಭಾಗದ ಗೇಟ್ನಲ್ಲಿ ಎರಡು ಚಿರತೆಗಳು ಓಡಾಟ ನಡೆಸಿರುವ ದೃಶ್ಯ ಸೆರೆಯಾಗಿದೆ. ಈ ಸಂಬಂಧ ಅರಣ್ಯಾಧಿಕಾರಿಗಳು ಸಿಸಿಟಿವಿಯನ್ನು ಪರಿಶೀಲನೆ ಮಾಡಿದಾಗ ಅಲ್ಲಿ ಓಡಾಟ ನಡೆಸುತ್ತಿರುವುದು ಹುಲಿಗಳಲ್ಲ, ಚಿರತೆಗಳು ಎಂಬುದು ತಿಳಿದುಬಂದಿದೆ. ಸದ್ಯ ಈ ಚಿರತೆಗಳ ಸೆರೆಗೆ ಸಿಬ್ಬಂದಿ ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಇದನ್ನೂ ಓದಿ: ಮೈಸೂರು: ಮರಿಗಳನ್ನು ಹುಡುಕುತ್ತಾ ಬಂದು ಬೋನಿಗೆ ಬಿದ್ದ ತಾಯಿ ಚಿರತೆ