Watch Video: ವಾಹನ ತಪಾಸಣೆ ವೇಳೆ ಇದ್ದಕ್ಕಿದ್ದಂತೆ ಜೋಡಿ ಚಿರತೆಗಳು ಪ್ರತ್ಯಕ್ಷ! - Leopards - LEOPARDS
🎬 Watch Now: Feature Video
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Jul 18, 2024, 5:13 PM IST
ಚಂಪಾವತ್ (ಉತ್ತರಖಾಂಡ್): ಇಲ್ಲಿನ ಚಂಪಾವತ್ ಪ್ರದೇಶದಲ್ಲಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದ ವೇಳೆ ಜೋಡಿ ಚಿರತೆಗಳು ಹಠಾತ್ ಪ್ರತ್ಯಕ್ಷಗೊಂಡ ಘಟನೆ ನಡೆಯಿತು. ಇದ್ದಕ್ಕಿದ್ದಂತೆ ಚಿರತೆಗಳು ಪ್ರತ್ಯಕ್ಷಗೊಂಡಿದ್ದರಿಂದ ಪೊಲೀಸ್ ಸಿಬ್ಬಂದಿ ಮತ್ತು ಸಾರ್ವಜನಿಕರು ಕೆಲಕಾಲ ಭಯಬೀತರಾಗಿದ್ದರು.
ವಾಹನಗಳ ಓಡಾಟ ಮತ್ತು ಜನಜಂಗುಳಿ ನಡುವೆ ಚಿರತೆಗಳು ಹಾಯಾಗಿ ನಡೆದುಕೊಂಡು ಹೋಗುತ್ತಿದ್ದ ದೃಶ್ಯವನ್ನು ಯಾರೋ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ರೀತಾ ಪೊಲೀಸ್ ಠಾಣೆಯ ಎಸ್‌ಒ ಕಮಲೇಶ್ ಭಟ್ ಅವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ತಮ್ಮ ಸಿಬ್ಬಂದಿ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಎರಡು ಚಿರತೆಗಳು ಕಾಣಿಸಿಕೊಂಡವು. ಹಾಗೆಯೇ ಬಂದು ಹೀಗೆಯೇ ನಮ್ಮ ಕಣ್ಣ ಮುಂದೆ ಹಾದು ಹೋದವು. ಅವುಗಳ ಅನಿರೀಕ್ಷಿತ ಆಗಮನದಿಂದ ನಾವುಗಳು ಭಯಬೀತರಾಗಿದ್ದೆವು. ಯಾರಿಗೂ ಯಾವ ತೊಂದರೆಯೂ ಕೊಡಲಿಲ್ಲ ಎಂದು ಅವರು ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಬುಧವಾರ ಸಂಜೆ ಈ ಘಟನೆ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇದನ್ನೂ ಓದಿ: ಹಳ್ಳಿಗೆ ನುಗ್ಗಿದ ಚಿರತೆ, 7 ಜನರ ಮೇಲೆ ದಾಳಿ: ಮನಬಂದಂತೆ ದೊಣ್ಣೆಗಳಿಂದ ಹೊಡೆದ ಜನರು-ವಿಡಿಯೋ - Leopard Attack