ಮೈಸೂರು: ಮರಿಗಳನ್ನು ಹುಡುಕುತ್ತಾ ಬಂದು ಬೋನಿಗೆ ಬಿದ್ದ ತಾಯಿ ಚಿರತೆ - Leopard
🎬 Watch Now: Feature Video
Published : Feb 1, 2024, 7:21 AM IST
ಮೈಸೂರು: ಕಳೆದ ಮೂರು ದಿನಗಳ ಹಿಂದೆ ಕಬ್ಬು ಕಟಾವು ಮಾಡುವ ವೇಳೆ ಮೂರು ಚಿರತೆ ಮರಿಗಳು ಸಿಕ್ಕ ಸ್ಥಳದಲ್ಲಿಡಲಾಗಿದ್ದ ಬೋನಿನಲ್ಲಿ ತಾಯಿ ಚಿರತೆಯೂ ಸೆರೆಯಾಗಿದೆ. ಈ ಘಟನೆ ಮೈಸೂರು ತಾಲೂಕಿನ ಮಾರಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ. ತಾಯಿ ಚಿರತೆಯೊಂದಿಗೆ ಮರಿಗಳನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ.
ಮಾರಶೆಟ್ಟಹಳ್ಳಿ ಗ್ರಾಮದ ಸುತ್ತಮುತ್ತ ಚಿರತೆಗಳು ಹೆಚ್ಚಾಗಿವೆ. ಕಳೆದ ಕೆಲ ದಿನಗಳ ಹಿಂದೆ ಗ್ರಾಮದ ಬಸವಣ್ಣ ಎಂಬವರ ಕಬ್ಬಿನ ಗದ್ದೆಯಲ್ಲಿ ಕಟಾವು ಮಾಡುವ ಸಂದರ್ಭದಲ್ಲಿ ಮೂರು ಚಿರತೆ ಮರಿಗಳು ಸಿಕ್ಕಿದ್ದವು. ನಂತರ ಇಲಾಖೆ ಅದೇ ಸ್ಥಳದಲ್ಲಿ ಬೋನ್ ಇಟ್ಟಿತ್ತು. ಇದೀಗ ಮರಿಗಳನ್ನು ನೋಡಲು ಬಂದ ತಾಯಿ ಚಿರತೆ ಅದರಲ್ಲಿ ಸೆರೆಯಾಗಿದೆ.
ಚಿರತೆಯ ಚೀರಾಟ ಕೇಳಿದ ಸ್ಥಳೀಯರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಸಿಬ್ಬಂದಿ, ತಾಯಿ ಚಿರತೆ ಹಾಗೂ ಅದರ ಮರಿಗಳನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡಲು ಕ್ರಮ ಕೈಗೊಂಡಿದ್ದಾರೆ. ಚಿರತೆಗಳು ಸೆರೆಯಾದ ಹಿನ್ನೆಲೆಯಲ್ಲಿ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಇದನ್ನೂ ಓದಿ: ಉಡುಪಿ: ನೀರಿನ ಟ್ಯಾಂಕ್‌ಗೆ ಬಿದ್ದ ಚಿರತೆ ರಕ್ಷಣೆ