VIDEO: ಫ್ಲೈಓವರ್ ತಡೆಗೋಡೆ ಏರಿದ ಕೆಎಸ್ಆರ್ಟಿಸಿ ಬಸ್, ಕೂದಲೆಳೆ ಅಂತರದಲ್ಲಿ ತಪ್ಪಿದ ಅನಾಹುತ - KSRTC Bus Accident - KSRTC BUS ACCIDENT
🎬 Watch Now: Feature Video
Published : May 18, 2024, 6:02 PM IST
ನೆಲಮಂಗಲ: ಇಲ್ಲಿನ ನೆಲಮಂಗಲ - ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕೆಎಸ್ಆರ್ಟಿಸಿ ಬಸ್ ಕೂದಲೆಳೆ ಅಂತರದಲ್ಲಿ ಭಾರೀ ಅವಘಡದಿಂದ ಪಾರಾಗಿದೆ. ತಾಲೂಕಿನ ಅಡಕರಮಾರನಹಳ್ಳಿ ಸಮೀಪ ಚಾಲಕನ ನಿಯಂತ್ರಣ ತಪ್ಪಿ ಬಸ್ ಡಿವೈಡರ್ಗೆ ಡಿಕ್ಕಿ ಹೊಡೆದು ಫ್ಲೈ ಓವರ್ ತಡೆಗೋಡೆ ಏರಿದ ಘಟನೆ ನಡೆದಿದೆ. ಬಸ್ನಲ್ಲಿದ್ದ ಪ್ರಯಾಣಿಕರು ಮತ್ತು ಸಿಬ್ಬಂದಿ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಫ್ಲೈ ಓವರ್ ತಡೆಗೋಡೆ ಮೇಲೆ ನಿಂತ ಬಸ್: ಕೆಎಸ್ಆರ್ಟಿಸಿ ಬಸ್ ಸೋಮವಾರ ಪೇಟೆಯಿಂದ ಬೆಂಗಳೂರಿಗೆ ಸಂಚರಿಸುತ್ತಿತ್ತು. ಈ ವೇಳೆ ಹೆದ್ದಾರಿಯಲ್ಲಿರುವ ಬಸ್ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆದಿದೆ. ಬಳಿಕ 40 ಅಡಿ ಎತ್ತರದ ಜೋಡಿ ಫ್ಲೈ ಓವರ್ ತಡೆಗೋಡೆ ಏರಿ ಬಸ್ ನಿಂತಿದೆ. ಘಟನೆಯಲ್ಲಿ ಚಾಲಕ-ನಿರ್ವಾಹಕ ಸೇರಿ ಆರು ಜನರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಬಸ್ನ ಮುಂಭಾಗ ನಜ್ಜುಗುಜ್ಜಾಗಿದೆ.
ಅಪಘಾತ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ-4ರಲ್ಲಿ ಕೆಲಕಾಲ ಸಂಚಾರ ಅಸ್ತವ್ಯಸ್ತವಾಗಿತ್ತು. ಸ್ಥಳಕ್ಕೆ ಬಂದ ನೆಲಮಂಗಲ ಸಂಚಾರಿ ಪೊಲೀಸರು ಪರಿಶೀಲನೆ ನಡೆಸಿ, ಟ್ರಾಫಿಕ್ ಜಾಮ್ ನಿಯಂತ್ರಿಸಿದರು. ಜೊತೆಗೆ ಅಪಾಯಕಾರಿ ರೀತಿಯಲ್ಲಿ ನಿಂತಿದ್ದ ಬಸ್ಅನ್ನು ಕ್ರೇನ್ ಮೂಲಕ ಕೆಳಗಿಳಿಸಿದರು. ಈ ವೇಳೆ ಸ್ಥಳದಲ್ಲಿ ಹಲವು ಸಾರ್ವಜನಿಕರು ಸೇರಿದ್ದರು.
ಇದನ್ನೂ ಓದಿ: ಸ್ಟೇರಿಂಗ್ ರಾಡ್ ತುಂಡಾಗಿ ಕೆಎಸ್ಆರ್ಟಿಸಿ ಬಸ್ ಅಪಘಾತ; ಚಾಲಕ ಸೇರಿ ಹಲವರಿಗೆ ಗಾಯ - KSRTC Bus Accident