LIVE: ವಿಧಾನಪರಿಷತ್​ ಕಲಾಪದ ನೇರ ಪ್ರಸಾರ - ವಿಧಾನಪರಿಷತ್​ ಕಲಾಪ

🎬 Watch Now: Feature Video

thumbnail

By ETV Bharat Karnataka Team

Published : Feb 14, 2024, 10:32 AM IST

Updated : Feb 14, 2024, 6:16 PM IST

ಬೆಂಗಳೂರು: ಫೆ.23ರವರೆಗೆ ನಡೆಯಲಿರುವ ವಿಧಾನಮಂಡಲ ಅಧಿವೇಶನದಲ್ಲಿ ಪರಿಷತ್​ ಕಲಾಪ ನಡೆಯುತ್ತಿದೆ.  ವಿಧಾನಪರಿಷತ್​ ಕಲಾಪದ ನೇರಪ್ರಸಾರ ಇಲ್ಲಿದೆ.

ಉಭಯ ಸದನಗಳಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಹಾಗೂ ಜೆಡಿಎಸ್​ ಪಕ್ಷಗಳು ತಂತ್ರ ಹೆಣೆದಿವೆ. ಸರ್ಕಾರ ಕೂಡ ಪ್ರತಿಪಕ್ಷಗಳಿಗೆ ಪ್ರತ್ಯುತ್ತರ ನೀಡಲು ತಯಾರಿ ಮಾಡಿಕೊಂಡಿದೆ. ಬರ ನಿರ್ವಹಣೆ ವೈಫಲ್ಯ, ಕಮಿಷನ್ ಆರೋಪ ಕುರಿತು ಉಭಯ ಸದನಗಳಲ್ಲಿ ಪ್ರಸ್ತಾಪಿಸಿ ಹೋರಾಟ ನಡೆಸಲು ಮೊನ್ನೆಯೇ ಬಿಜೆಪಿ ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ. ಹಾಗೆಯೇ, ಕಾಂಗ್ರೆಸ್ ಸರ್ಕಾರ ಕೂಡ ಕೇಂದ್ರದ ಬಿಜೆಪಿ ಸರ್ಕಾರ ತಾರತಮ್ಯದ ಬಗ್ಗೆ ಪ್ರಸ್ತಾಪಿಸಿ, ತಿರುಗೇಟು ನೀಡಲು ಸಜ್ಜಾಗಿದೆ.

ಮಂಗಳವಾರದ ಪರಿಷತ್​​ ಕಲಾಪದ ವೇಳೆ ಮಾತನಾಡಿದ್ದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ, ಬಡ್ತಿ ಪಡೆದು ಉಪನ್ಯಾಸಕರಾಗಿರುವ ಹಿರಿಯ ಮತ್ತು ಕಿರಿಯ ಸರ್ಕಾರಿ ನೌಕರರ ವೇತನದಲ್ಲಿನ ತಾರತಮ್ಯ ನಿವಾರಿಸಲು ಪ್ರಸ್ತುತ ಚಾಲ್ತಿಯಲ್ಲಿರುವ ವೇತನ ಹೆಚ್ಚಳ ನಿಯಮಗಳು/ಆದೇಶಗಳಿಗೆ ಆದಷ್ಟು ಬೇಗ ತಿದ್ದುಪಡಿ ತರಲಾಗುತ್ತದೆ ಎಂದು ತಿಳಿಸಿದ್ದರು. ನಿಯಮ 330ರ ಅಡಿ ಸದಸ್ಯರಾದ ಮರಿತಿಬ್ಬೇಗೌಡ, ಬೋಜೇಗೌಡ ಹಾಗೂ ಎಸ್.ವಿ.ಸಂಕನೂರ್ ಅವರು ಪ್ರಸ್ತಾಪಿಸಿದ ಚರ್ಚೆಗೆ ಸಚಿವರು ಉತ್ತರಿಸಿದ್ದರು.

Last Updated : Feb 14, 2024, 6:16 PM IST

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.