ಕರ್ನಾಟಕ ವಿಧಾನಸಭೆ ಮುಂಗಾರು ಅಧಿವೇಶನ: LIVE - Assembly Session - ASSEMBLY SESSION
🎬 Watch Now: Feature Video
Published : Jul 22, 2024, 11:21 AM IST
|Updated : Jul 22, 2024, 2:05 PM IST
ಬೆಂಗಳೂರು: ರಾಜ್ಯ ವಿಧಾನ ಮಂಡಲದ ಮುಂಗಾರು ಅಧಿವೇಶನ ಇಂದು 5ನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ನಾಲ್ಕು ದಿನದ ಕಲಾಪದಲ್ಲಿ ಪ್ರತಿಪಕ್ಷಗಳು ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಅಕ್ರಮ ಹಣ ವರ್ಗಾವಣೆ ಪ್ರಕರಣ ಸಂಬಂಧ ಸರ್ಕಾರದ ಮೇಲೆ ಮುಗಿಬಿದ್ದಿದ್ದವು. ಸಿಎಂ ಸಿದ್ದರಾಮಯ್ಯನವರ ರಾಜೀನಾಮೆಗೂ ಒತ್ತಾಯಿಸಿದ್ದವು. ಇದರಿಂದ ಸದನದಲ್ಲಿ ಪ್ರತಿಪಕ್ಷ ಮತ್ತು ಸರ್ಕಾರದ ನಡುವೆ ವಾಕ್ಸಮರ ಉಂಟಾಗಿತ್ತು. ಶುಕ್ರವಾರ ಸದನದಲ್ಲಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರ ಧರಣಿ ನಡುವೆ ವಾಲ್ಮೀಕಿ ನಿಗಮದಲ್ಲಿ ನಡೆದಿರುವ ಹಗರಣ ಸಂಬಂಧ ಉತ್ತರ ನೀಡುತ್ತಾ ಸಿಎಂ ಸಿದ್ದರಾಮಯ್ಯ ಹರಿಹಾಯ್ದರು. ಬಿಜೆಪಿ ಅವಧಿಯಲ್ಲಿ ಲೆಕ್ಕ ಹಾಕದಷ್ಟು ಹಗರಣಗಳಿವೆ. ಎಲ್ಲವನ್ನೂ ನಾನು ಬಯಲಿಗೆಳೆಯುತ್ತೇನೆ ಎಂದರು. ಇವರನ್ನು ಕಳ್ಳರು, ಲೂಟಿಕೋರರು ಎಂದು ಜನರು ಪ್ರತಿಪಕ್ಷದ ಸ್ಥಾನದಲ್ಲಿ ಕೂರಿಸಿದ್ದಾರೆ. ನಾನು ಜಗ್ಗಲ್ಲ, ಬಗ್ಗಲ್ಲ, ನಿಮ್ಮ ಎಲ್ಲಾ ಹಗರಣಗಳ ತನಿಖೆ ಮಾಡಿಸಿ ಜೈಲಿಗೆ ಕಳುಹಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಶಪಥ ಮಾಡಿದರು. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಡೆದ 21 ಹಗರಣಗಳ ಬಗ್ಗೆ ಸಿಎಂ ಸದನದಲ್ಲಿ ಲಿಖಿತ ರೂಪದಲ್ಲಿ ಶುಕ್ರವಾರ ಮಾಹಿತಿ ಬಹಿರಂಗಪಡಿಸಿದರು.
Last Updated : Jul 22, 2024, 2:05 PM IST