LIVE: ವಿಧಾನಸಭೆ ಕಲಾಪದ ನೇರಪ್ರಸಾರ - ಬಜೆಟ್ ಅಧಿವೇಶನ
🎬 Watch Now: Feature Video
Published : Feb 23, 2024, 10:26 AM IST
|Updated : Feb 23, 2024, 11:43 AM IST
ಬೆಂಗಳೂರು: ಫೆಬ್ರವರಿ 12ರಿಂದ ಆರಂಭವಾಗಿರುವ ರಾಜ್ಯ ವಿಧಾನಮಂಡಲ ಅಧಿವೇಶನದಲ್ಲಿ ಇಂದು 10ನೇ ಹಾಗೂ ಕೊನೆಯ ದಿನದ ಕಲಾಪ ನಡೆಯುತ್ತಿದೆ. ಫೆ. 16 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2024-25ನೇ ಸಾಲಿನ ಆಯವ್ಯಯ ಮಂಡನೆ ಮಾಡಿದ್ದರು. ವಿಧಾನಸಭೆ ಕಲಾಪ ನಡೆಯುತ್ತಿದ್ದು, ಇದರ ನೇರಪ್ರಸಾರ ವೀಕ್ಷಿಸಿ.
ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕೆಂದು ಎಂ.ಎಸ್. ಸ್ವಾಮಿನಾಥ್ ವರದಿ ಜಾರಿಗೆ ಹಾಗೂ ಕೇಂದ್ರದ ಅನುದಾನ ಹಂಚಿಕೆಯಲ್ಲಿ ರಾಜ್ಯಕ್ಕೆ ಅನ್ಯಾಯವಾಗದಂತೆ ಒತ್ತಾಯಿಸಿ ಗುರುವಾರ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕಾರ ಮಾಡಲಾಗಿದೆ. ವಿಧಾನಸಭೆಯಲ್ಲಿ ಎರಡು ನಿರ್ಣಯಗಳನ್ನು ಕಾನೂನು ಸಚಿವ ಹೆಚ್.ಕೆ. ಪಾಟೀಲ್ ಅವರು ಮಂಡನೆ ಮಾಡಿದ್ದಾರೆ. ಇದಕ್ಕೆ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಸದನದಲ್ಲಿ ತೀವ್ರ ಗದ್ದಲ ಏರ್ಪಟ್ಟಿತು. ಬಿಜೆಪಿ ಸದಸ್ಯರ ತೀವ್ರ ವಿರೋಧ, ಗದ್ದಲದ ಮಧ್ಯೆ ಎರಡೂ ನಿರ್ಣಯಗಳಿಗೆ ಸದನದಲ್ಲಿ ಅಂಗೀಕಾರ ಪಡೆಯಲಾಯಿತು. ನಿರ್ಣಯದ ಪ್ರತಿ ಹರಿದು ಬಿಸಾಡಿದ ಬಿಜೆಪಿ ಶಾಸಕರು, ಧರಣಿ ನಡೆಸಿದ್ದರು.
ಕರ್ನಾಟಕದ ಅಭಿವೃದ್ಧಿ ಹಾಗೂ ನಾಗರಿಕರ ಹಿತರಕ್ಷಣೆಯಲ್ಲಿ ಸಮಾನ ಹಂಚಿಕೆ ಮತ್ತು ತಾರತಮ್ಯರಹಿತ ಆರ್ಥಿಕ ಸಂಪನ್ಮೂಲಗಳ ಹಂಚಿಕೆಯ ನಿಲುವುಗಳನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು. ಕರ್ನಾಟಕದ ಜನತೆಯ ಹಿತರಕ್ಷಣೆಯಲ್ಲಿ ಯಾವುದೇ ಅನ್ಯಾಯ ಆಗಬಾರದೆಂದು ಸದನದ ಮೂಲಕ ಒಕ್ಕೋರಲಿನಿಂದ ಒತ್ತಾಯಿಸಿ ಅಧಿಕೃತ ನಿರ್ಣಯ ಮಂಡಿಸಿದರು.