ಕನ್ನಡಿಯೊಳಗಿನ ಗಂಟು ಈ ಮಧ್ಯಂತರ ಬಜೆಟ್: ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ ಎಸ್ ವಿಮಲಾ - ಕೆ ಎಸ್ ವಿಮಲಾ

🎬 Watch Now: Feature Video

thumbnail

By ETV Bharat Karnataka Team

Published : Feb 1, 2024, 9:44 PM IST

ಬೆಂಗಳೂರು: ಕೇಂದ್ರ ಸರ್ಕಾರದ ಕೊನೆಯ ಹಾಗೂ ಮಧ್ಯಂತರ ಬಜೆಟ್ ಅನ್ನ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು‌ ಸಂಸತ್ತಿನಲ್ಲಿ ಇಂದು ಮಂಡಿಸಿದ್ದಾರೆ. ಬಜೆಟ್ ಕುರಿತಂತೆ ಪರ - ವಿರೋಧದ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ. ರಾಜಕೀಯ ಪಕ್ಷಗಳ ನಾಯಕರು, ಉದ್ಯಮಿಗಳು, ವರ್ತಕರು, ರೈತ ಮುಖಂಡರು ಒಳಗೊಂಡಂತೆ ಮಧ್ಯಂತರ ಬಜೆಟ್ ಬಗ್ಗೆ ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸುತ್ತಿದ್ದಾರೆ.

ಬಜೆಟ್ ಕುರಿತಂತೆ ಜನವಾದಿ ಮಹಿಳಾ ಸಂಘಟನೆ ರಾಜ್ಯ ಉಪಾಧ್ಯಕ್ಷೆ ಕೆ ಎಸ್ ವಿಮಲಾ ಅವರು ಪ್ರತಿಕ್ರಿಯಿಸಿದ್ದು, ಪ್ರತಿವರ್ಷದಂತೆ ಈ ಬಾರಿಯೂ ನಿರಾಶದಾಯಕ ಬಜೆಟ್ ಇದಾಗಿದೆ. ಕನ್ನಡಿಯೊಳಗಿನ ಗಂಟು ಇದಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯನ್ನ ಅಂಗನವಾಡಿ ಹಾಗೂ ಆಶಾ ಕಾರ್ಯಕರ್ತೆಯರಿಗೆ ವಿಸ್ತರಿಸಲಾಗಿದೆ. ಆದರೆ ಎಷ್ಟರ ಮಟ್ಟಿಗೆ ಪರಿಣಾಮಕಾರಿಯಾಗಿ ಬಳಕೆಯಾಗಲಿದೆ ಎಂಬುದನ್ನ ನೋಡಬೇಕಿದೆ. 

ಅಲ್ಲದೇ ವೇತನ ಹೆಚ್ಚಳ ಹಾಗೂ ಉದ್ಯೋಗ ಖಾಯಂ ಬಗ್ಗೆ ಪ್ರಸ್ತಾಪಿಸದಿರುವುದು ನಿರಾಸೆಯಾಗಿದೆ. ಮಧ್ಯಂತರ ಬಜೆಟ್ ನಿಂದ‌ ಕರ್ನಾಟಕಕ್ಕೆ‌ ಏನು ಉಪಯೋಗವಿಲ್ಲದಂತಿದೆ. ಸಾಮಾನ್ಯ ಬೋಗಿಯಲ್ಲಿ ವಂದೇ ಭಾರತ್ ಮಾದರಿಯಲ್ಲಿ ಅಭಿವೃದ್ದಿ ಬೇಕಾಗಿರಲಿಲ್ಲ. ಇದರಿಂದ ದುಬಾರಿ ದರ ವಿಧಿಸಿ ಪ್ರಯಾಣಿಕರ ಜೇಬು ಖಾಲಿಯಾಗಲಿದೆ. ಒಟ್ಟಾರೆ ಅಂಕನೀಡಲು ಆಗದ ಶೂನ್ಯ ಬಜೆಟ್ ಇದಾಗಿದೆ‌ ಎಂದು ವಿರ್ಮಶಿಸಿದರು.

ಇದನ್ನೂ ಓದಿ : ಕೇಂದ್ರ ಬಜೆಟ್ ಜನರ ನಿರೀಕ್ಷೆಗಳನ್ನ ಹುಸಿಗೊಳಿಸಿದೆ: ಬೆಳಗಾವಿ ಕನ್ನಡ, ರೈತಪರ ಮುಖಂಡರ ಅಸಮಾಧಾನ

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.