ಟಿ-20 ವಿಶ್ವಕಪ್​ ಗೆದ್ದ ಭಾರತ: ಬೆಂಗಳೂರಿನ ವಿವಿಧೆಡೆ ಸಂಭ್ರಮ - India Celebrates World Cup Victory

By ETV Bharat Karnataka Team

Published : Jun 30, 2024, 9:26 AM IST

thumbnail
ಭಾರತದ ಮುಡಿಗೆ ಟಿ-20 ವಿಶ್ವಕಪ್, ಬೆಂಗಳೂರಿಲ್ಲಿ​ ಸಂಭ್ರಮ (ETV Bharat)

ಬೆಂಗಳೂರು: ಭಾರತ ಕ್ರಿಕೆಟ್ ತಂಡ ಟಿ-20 ವಿಶ್ವಕಪ್​ ಗೆದ್ದ ಹಿನ್ನೆಲೆಯಲ್ಲಿ ಕಳೆದ ರಾತ್ರಿ ನಗರದ ವಿವಿಧೆಡೆ ಸಂಭ್ರಮ ಮುಗಿಲು ಮಟ್ಟಿತ್ತು. ಅಭಿಮಾನಿಗಳು ಪಟಾಕಿ ಸಿಡಿಸಿ, ಕುಣಿದು ಕುಪ್ಪಳಿಸಿ ಖುಷಿಪಟ್ಟರು. ಪರಸ್ಪರ ಸಿಹಿ ಹಂಚಿ ಶುಭಾಶಯ ವಿನಿಮಯ ಮಾಡಿಕೊಂಡ ದೃಶ್ಯಗಳು ಕಂಡುಬಂದವು.

ಫೈನಲ್‌ ಪಂದ್ಯ ಕೋಟ್ಯಂತರ ಭಾರತೀಯರನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿತ್ತು. ಅಂತಿಮವಾಗಿ, 11 ವರ್ಷಗಳ ನಂತರ ಭಾರತ ಮಹತ್ವದ ಟ್ರೋಫಿ ಗೆದ್ದುಕೊಂಡಿದೆ.

ಅಂತಿಮ ಎಸೆತದವರೆಗೂ ತೀವ್ರ ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ತಂಡ 7 ರನ್​ಗಳಿಂದ ಭರ್ಜರಿ ಗೆಲುವು ಪಡೆಯಿತು. ಇದರೊಂದಿಗೆ 2ನೇ ಬಾರಿ ಟಿ-20 ವಿಶ್ವಕಪ್​ಗೆ ಮುತ್ತಿಕ್ಕಿದೆ. ವಿಜೇತ ತಂಡಕ್ಕೆ ದೇಶದೆಲ್ಲೆಡೆಯಿಂದ ಶುಭಾಶಯಗಳ ಮಹಾಪೂರವೇ ಆಗುತ್ತಿದೆ. 

ಇದನ್ನೂ ಓದಿ: ಟಿ20 ವರ್ಲ್ಡ್​ಕಪ್​ ಚಾಂಪಿಯನ್​ ಆಗಿ ಇತಿಹಾಸ ಬರೆದ ಟೀಂ ಇಂಡಿಯಾ! - INDIA CREATES HISTORY

ಐಸಿಸಿ ಟ್ರೋಪಿ ಬರ ನೀಗಿಸಿಕೊಂಡ ಟೀಂ ಇಂಡಿಯಾ: ಕೊಹ್ಲಿ ಪಂದ್ಯ ಪುರುಷ, ಬುಮ್ರಾಗೆ ಸರಣಿ ಶ್ರೇಷ್ಠ ಪುರಸ್ಕಾರ - INDIA WIN T20 World Cup 2024

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.