'ಯುವ' ಸಕ್ಸಸ್: ಪ್ರೇಕ್ಷಕರಿಗೆ ಹೋಳಿಗೆ ತುಪ್ಪ ವಿತರಣೆ ಮಾಡಿ ಅಭಿಮಾನಿಗಳ ಸಂಭ್ರಮ - sweet distributed - SWEET DISTRIBUTED
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/29-03-2024/640-480-21098945-thumbnail-16x9-am.jpg)
![ETV Bharat Karnataka Team](https://etvbharatimages.akamaized.net/etvbharat/prod-images/authors/karnataka-1716535795.jpeg)
Published : Mar 29, 2024, 7:18 PM IST
ದೊಡ್ಡಬಳ್ಳಾಪುರ: ರಾಜ್ ವಂಶದ ಕುಡಿ ಯುವರಾಜ್ ಕುಮಾರ್ ಅಭಿನಯದ 'ಯುವ' ಸಿನಿಮಾ ಇಂದು ರಾಜ್ಯಾದ್ಯಂತ ತೆರೆಕಂಡಿದೆ. ಇದೇ ಖುಷಿಗೆ ಅಭಿಮಾನಿಗಳು ಮೊದಲ ಶೋ ನೋಡಲು ಬಂದ ಪೇಕ್ಷಕರಿಗೆ ಹೋಳಿಗೆ ತುಪ್ಪ ವಿತರಣೆ ಮಾಡಿದರು.
ದೊಡ್ಡಬಳ್ಳಾಪುರ ನಗರ ಭಾಗದ ವೈಭವ ಚಿತ್ರಮಂದಿರದಲ್ಲಿ ಅಭಿಮಾನಿಗಳು ಯುವ ರಾಜ್ಕುಮಾರ್ ಕಟೌಟ್ಗೆ ಹಾಲಿನ ಅಭಿಷೇಕ ಮಾಡುವ ಮೂಲಕ ಸಿನಿಮಾವನ್ನು ಭರ್ಜರಿಯಾಗಿ ಸ್ವಾಗತಿಸಿದರು. ಕಲ್ಲುದೇವನಹಳ್ಳಿ ನಾಗರಾಜ್ ಮತ್ತು ಸಂಗಡಿಗರು ಚಿತ್ರಮಂದಿರಕ್ಕೆ ಬರುವ ಸಿನಿ ಪ್ರೇಕ್ಷಕರಿಗೆ ಹೋಳಿಗೆ ಮತ್ತು ತುಪ್ಪ ನೀಡುವ ಮೂಲಕ ಸಂಭ್ರಮಿಸಿದರು.
ಈ ಕುರಿತು ಕಲ್ಲುದೇವನಹಳ್ಳಿ ನಾಗರಾಜ್ ಮಾತನಾಡಿ, 'ಅಪ್ಪು ಅಭಿಮಾನಿಗಳು ಹಾಗೂ ರಾಜ್ ಕುಟುಂಬದ ಅಭಿಮಾನಿಗಳಿಗೆ ಇಂದು ಹಬ್ಬದ ವಾತಾವರಣ. ಕಾರಣ ನಮ್ಮ ಯುವ ರಾಜ್ಕುಮಾರ್ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದಾರೆ. ರಾಜ್ ಕುಟುಂಬದ ಅಭಿಮಾನಿಗಳಿಗೆ ಯುಗಾದಿ ಹಬ್ಬವು ಇಂದೇ ಪ್ರಾರಂಭವಾಗಿದ್ದು, ಸಿನಿ ಪ್ರೇಕ್ಷಕರಿಗೆ ಒಬ್ಬಟ್ಟು ನೀಡಿ ಸ್ವಾಗತಿಸುತ್ತಿದ್ದೇವೆ' ಎಂದರು.
ಈ ಸಂದರ್ಭದಲ್ಲಿ ಕೆಂಪರಾಜು, ಚೌಡರಾಜು, ಚಂದ್ರಶೇಖರ್, ಸೀನಪ್ಪ, ನಿತಿನ್ಕುಮಾರ್, ದೇವರಾಜ್, ವಿಕ್ಕಿ ಸೇರಿದಂತೆ ಎಲ್ಲಾ ರಾಜ್ ಕುಟುಂಬದ ಅಭಿಮಾನಿಗಳು ಉಪಸ್ಥಿತರಿದ್ದರು.
ಇದನ್ನೂ ಓದಿ: 'ಯುವ'ನಲ್ಲಿ ನೆನಪಾದ ಅಪ್ಪು: ತಂದೆ ಮಗನ ಬಾಂಧವ್ಯಕ್ಕೆ ಮನಸೋತ ಅಭಿಮಾನಿಗಳು - YUVA CINEMA