ಹೊಗೆನಕಲ್ ಕಾವೇರಿ ಒಳಹರಿವು ಇಳಿಮುಖ: ಎರಡು ದಿನ ದಿಢೀರ್ ಹೆಚ್ಚಿದ್ದ ನೀರಿನ ಮಟ್ಟ - Hogenakal Cauvery inflow
🎬 Watch Now: Feature Video
Published : Mar 15, 2024, 10:58 PM IST
ಚಾಮರಾಜನಗರ : ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿ ಕಾವೇರಿಯು ಜಲವೈಯ್ಯಾರ ಸೃಷ್ಟಿಸುವ ಹೊಗೆನಕಲ್ ಜಲಪಾತದಲ್ಲಿ ದಿಢೀರ್ ನೀರಿನ ಮಟ್ಟ ಹೆಚ್ಚಾಗಿ ಈಗ ಮತ್ತೆ ಇಳಿಕೆ ಕಂಡಿದೆ. ತಮಿಳುನಾಡಿನ ಬಿಳಿಗುಂಡ್ಲು ಸಿಬ್ಬಂದಿ ಮಾಹಿತಿ ಪ್ರಕಾರ, ಬುಧವಾರ 4 ಸಾವಿರ ಘನ ಅಡಿಗೆ ಏರಿತ್ತು. ಗುರುವಾರ 2,800 ಘನ ಅಡಿ ಇದ್ದ ನೀರಿನ ಮಟ್ಟ ಈಗ 1200ಕ್ಕೆ ಇಳಿದಿದೆ.
ಹೊಗೆನಕಲ್ನಲ್ಲಿ ದಿಢೀರ್ ನೀರಿನ ಮಟ್ಟ ಏರಿಕೆ ಕಂಡು ಸ್ಥಳೀಯರು, ಪ್ರವಾಸಿಗರು ಅವಾಕ್ಕಾಗುವ ಜೊತೆ ಜಲವೈಯ್ಯಾರವನ್ನು ಕಳೆದ ಎರಡು ದಿನ ಕಣ್ತುಂಬಿಕೊಂಡಿದ್ದಾರೆ.
ಹೊಗೆನಕಲ್ ಜಲಪಾತದ ಬಗ್ಗೆ ಒಂದಿಷ್ಟು : ಹೊಗೆನಕಲ್ ಜಲಪಾತವು ದಕ್ಷಿಣ ಭಾರತದ ಕಾವೇರಿ ನದಿಗೆ ಸೇರಿದೆ. ಇದು ದಕ್ಷಿಣ ಭಾರತದ ತಮಿಳುನಾಡು ರಾಜ್ಯದ ಧರ್ಮಪುರಿ ಜಿಲ್ಲೆಯಲ್ಲಿದೆ. ಬೆಂಗಳೂರಿನಿಂದ ಸುಮಾರು 180 ಕಿ.ಮೀ ದೂರದಲ್ಲಿ ಈ ಜಲಪಾತ ಕಂಡುಬರುತ್ತದೆ. ಭಾರತದ "ನಯಾಗರ ಜಲಪಾತ"ವೆಂದೇ ಹೊಗೆನಕಲ್ ಸುಪ್ರಸಿದ್ಧವಾಗಿದೆ. ಬಂಡೆಗಳ ಮೇಲೆ ಅಪ್ಪಳಿಸುವ ನೀರು ಹೊಗೆಯಂತೆ ಹೊರಹೊಮ್ಮುತ್ತದೆ. ಆದ್ದರಿಂದ ಇದಕ್ಕೆ "ಹೊಗೆನಕಲ್" ಎಂಬ ಹೆಸರು ಬಂದಿದೆ. ಹೊಗೆನಕಲ್ ಜಲಪಾತ ಕರ್ನಾಟಕ-ತಮಿಳುನಾಡು ರಾಜ್ಯಗಳ ಗಡಿಯಲ್ಲಿದೆ.
ಇದನ್ನೂ ಓದಿ: ಹೊರಹರಿವು ಹೆಚ್ಚಳ: ಹೊಗೆನಕಲ್ನಲ್ಲಿ ಕಾವೇರಿ ಜಲವೈಯಾರ