ಹುಬ್ಬಳ್ಳಿ: ವಾಣಿಜ್ಯ ನಗರಿಯಲ್ಲಿ ಸುರಿದ ಗುಡುಗುಸಹಿತ ಮಳೆ - Hubballi Rain - HUBBALLI RAIN
🎬 Watch Now: Feature Video
Published : Apr 10, 2024, 9:24 PM IST
|Updated : Apr 10, 2024, 9:39 PM IST
ಹುಬ್ಬಳ್ಳಿ: ಬಿಸಿಲ ಬೇಗೆಯಿಂದ ತತ್ತರಿಸಿದ್ದ ವಾಣಿಜ್ಯ ನಗರಿ ಹುಬ್ಬಳ್ಳಿಗೆ ಮಳೆರಾಯ ಇಂದು ತುಸು ತಂಪೆರೆದಿದೆ. ವಿಪರೀತ ಧಗೆಯಿಂದ ತತ್ತರಿಸಿದ್ದ ಜನರ ಮೊಗದಲ್ಲಿ ವರ್ಷಧಾರೆ ಸಂತಸ ಮೂಡಿಸಿದೆ. ಯುಗಾದಿ ಬಳಿಕ ವರ್ಷದ ಮೊದಲ ಮಳೆ ಇದಾಗಿದ್ದರಿಂದ ರೈತಾಪಿ ವರ್ಗ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದೆ. ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳು ಗರಿಗೆದರುವಂತಾಗಿದೆ. ಹಿಂದೆಂದೂ ಕಂಡರಿಯದ ದಾಖಲೆಯ ಬಿಸಿಲಿನ ಝಳಕ್ಕೆ ಜನ ಬೇಸತ್ತಿದ್ದರು.
ಸಂಜೆಯ ವೇಳೆಗೆ ಗುಡುಗು ಸಹಿತ ಸುರಿದ ಮಳೆ ವಾಣಿಜ್ಯ ನಗರಿಯನ್ನು ಕೂಲ್ ಕೂಲ್ ಮಾಡಿತು. ವರುಣನ ಆಗಮನದಿಂದ ಜನರಲ್ಲಿ ಖುಷಿ ಇಮ್ಮಡಿಯಾಗಿದೆ. ಹುಬ್ಬಳ್ಳಿಯ ಬಹುತೇಕ ಕಡೆಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ಜನರ ಪುಳಕಗೊಂಡರು.
ಮಳೆಯಿಂದ ವಾತಾವರಣದಲ್ಲಿ ಬದಲಾವಣೆ ಆಗಿದ್ದು, ಬಿಸಿಗಾಳಿ ಬದಲಿಗೆ ತಂಗಾಳಿ ಬೀಸುತ್ತಿತ್ತು. ಸಂಜೆ ಸುರಿದ ಮಳೆಗೆ ಹಲವು ಕಡೆಗಳಲ್ಲಿ ರಸ್ತೆಗಳು ಜಲಾವೃತವಾಗಿವೆ. ಕೆಲವು ರಸ್ತೆಗಳಲ್ಲಿ ನೀರು ನಿಂತ ಕಾರಣ ವಾಹನಗಳ ಸಂಚಾರಗತಿ ನಿಧಾನವಾಗಿತ್ತು.
ಇದನ್ನೂ ಓದಿ: ಮಳೆಗಾಗಿ ಬಸವೇಶ್ವರನ ಮೊರೆ ಹೋದ ಕಾಫಿನಾಡಿನ ಜನ: ವಿಡಿಯೋ - Special Pooja For Rain God