ಹಾವೇರಿ: ಬೀಳ್ಕೊಡುಗೆ ವೇಳೆ ತಂದೆ-ತಾಯಿ ಪಾದಪೂಜೆ ನೆರವೇರಿಸಿ ಭಕ್ತಿ ವಾತ್ಸಲ್ಯ ಮೆರೆದ ವಿದ್ಯಾರ್ಥಿಗಳು - ಹಾವೇರಿ

🎬 Watch Now: Feature Video

thumbnail

By ETV Bharat Karnataka Team

Published : Feb 24, 2024, 9:14 PM IST

ಹಾವೇರಿ: ಜಿಲ್ಲೆಯ ರಟ್ಟಿಹಳ್ಳಿ ತಾಲೂಕು ಕುಡಪಲಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಭಿನ್ನವಾಗಿ ಬೀಳ್ಕೊಡುಗೆ ಹಾಗೂ ಸರಸ್ವತಿ ಪೂಜಾ ಸಮಾರಂಭವನ್ನು ಶಾಲಾ ಆಡಳಿತ ಮಂಡಳಿ ಹಮ್ಮಿಕೊಂಡಿತ್ತು.   

ತಾಯಿ-ತಂದೆ ಕಣ್ಣಿಗೆ ಕಾಣುವ ಜೀವಂತ ದೇವರು ಎನ್ನುವುದನ್ನು ಅರಿತ ಏಳನೇ ತರಗತಿ ವಿದ್ಯಾರ್ಥಿಗಳು ತಮ್ಮ ತಂದೆ ತಾಯಂದಿರಿಗೆ ಪಾದಪೂಜೆ ನೆರವೇರಿಸುವ ಮೂಲಕ ಬೀಳ್ಕೊಡುಗೆ ಸಮಾರಂಭದಲ್ಲಿ ಭಕ್ತಿ ಭಾವ ಮೆರೆದರು.

ಏಳನೇ ತರಗತಿ ವಿದ್ಯಾರ್ಥಿಗಳು ಮೊದಲು ತಮ್ಮ ತಮ್ಮ ತಂದೆ ತಾಯಂದಿರನ್ನು ಖುರ್ಚಿ ಮೇಲೆ ಕೂರಿಸಿ ಪಾದಗಳನ್ನು ತೊಳೆದರು. ನಂತರ ಹೂವು ಏರಿಸಿ ಊದಬತ್ತಿ ಹಚ್ಚಿ ಬೆಳಗಿದರು. ಈ ವೇಳೆ ಜೀವನದಲ್ಲಿ ಸದಾಕಾಲ ತಂದೆ ತಾಯಿ ನಮ್ಮ ಜೊತೆ ಇರುವಂತೆ ಮಕ್ಕಳು ದೇವರಲ್ಲಿ ಪ್ರಾರ್ಥನೆ ಸಲ್ಲಿಸಿದರು. 

ತಂದೆ-ತಾಯಿ ಮಕ್ಕಳ ನಡುವಿನ ಬಾಂಧವ್ಯ: ಪ್ರಸ್ತುತ ದಿನಗಳಲ್ಲಿ ತಂದೆ-ತಾಯಿ ಮಕ್ಕಳ ನಡುವಿನ ಬಾಂಧವ್ಯಕ್ಕೆ ಕುಂದು ಬರಲಾರಂಭಿಸಿದೆ. ಹೆತ್ತ ತಂದ ತಾಯಿಗಳನ್ನು ಮಕ್ಕಳಿಂದ ವೃದ್ಧಾಶ್ರಮ ಆನಾಥಾಶ್ರಮಗಳಲ್ಲಿ ಸೇರಿಸುವ ಪ್ರವೃತ್ತಿ ಅಧಿಕವಾಗುತ್ತಿದೆ. ಅದರ ಬದಲು ತಂದೆ ತಾಯಿಯ ಮಹತ್ವ ಅರಿತು ಮಕ್ಕಳು ದೇವರಂತೆ ತಂದೆ ತಾಯಿಯನ್ನು ನೋಡಿಕೊಳ್ಳಬೇಕು ಎನ್ನುವ ಕಾರಣದಿಂದ ಈ ರೀತಿಯ ಪಾದಪೂಜೆ ಆಯೋಜಿಸಿರುವುದಾಗಿ ಶಾಲಾ ಆಡಳಿತ ಮಂಡಳಿಯ ಸದಸ್ಯರು ತಿಳಿಸಿದ್ದಾರೆ.

ಕಾರ್ಯಕ್ರಮಕ್ಕೆ ಆಗಮಿಸಿದ್ದ ಅತಿಥಿಗಳು, ಪಾಲಕರು ಶಾಲಾ ಅಡಳಿತ ಮಂಡಳಿಯ ಪಾದಪೂಜೆ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. 

ಇದನ್ನೂಓದಿ:ಸರ್ಕಾರಿ ಶಾಲೆಯಲ್ಲಿ ಸಚಿವ ಆರ್​. ಅಶೋಕ್ ಗ್ರಾಮವಾಸ್ತವ್ಯ

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.