ನಾಡಿನೆಲ್ಲೆಡೆ ಗುರುಪೂರ್ಣಿಮೆ ಆಚರಣೆ: ಧಾರವಾಡದಲ್ಲಿ ಗುರು-ಶಿಷ್ಯ ಪರಂಪರೆ ಅನಾವರಣ - Guru Purnima - GURU PURNIMA
🎬 Watch Now: Feature Video
Published : Jul 21, 2024, 2:09 PM IST
ಧಾರವಾಡ: ಇಂದು ಗುರು ಪೂರ್ಣಿಮೆ. ಧಾರವಾಡದಲ್ಲಿ ಮಕ್ಕಳು ಭಾರತೀಯ ಗುರು-ಶಿಷ್ಯ ಪರಂಪರೆಯನ್ನು ಅನಾವರಣಗೊಳಿಸಿದರು. ಅನಾದಿ ಕಾಲದಿಂದ ಕಲಿಯುಗದವರೆಗಿನ ಗುರು-ಶಿಷ್ಯರ ನಡುವಿನ ವಿಶೇಷ ಸಂಬಂಧವನ್ನು ಅತ್ಯಂತ ಮನೋಜ್ಞವಾಗಿ ಪರಿಚಯಿಸಿದರು.
ಮೃತ್ಯುಂಜಯ ನಗರದಲ್ಲಿರುವ ಶ್ರೀ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಮಕ್ಕಳು ರಾಮಾಯಣ, ಪುರಾಣ, ಮಹಾಭಾರತ ಕಾಲದ ಗುರು ಶಿಷ್ಯರ ವೇಷಭೂಷಣದಲ್ಲಿ ಕಂಗೊಳಿಸಿದರು. ವ್ಯಾಸ - ಗಣಪತಿ, ವಾಲ್ಮೀಕಿ, ದ್ರೋಣಾಚಾರ್ಯ - ಏಕಲವ್ಯ, ಚಂದ್ರಗುಪ್ತ - ಚಾಣಕ್ಯ, ಜಿಜಾಬಾಯಿ - ಶಿವಾಜಿ, ಷರೀಫ - ಗೋವಿಂದ ಭಟ್ ಪರಂಪರೆಯನ್ನು ತೋರಿಸಿದರು.
ಪೌರಾಣಿಕದ ಜೊತೆಗೆ ಪ್ರಸ್ತುತ ಮಹನೀಯರ ವೇಷಭೂಷಣದಲ್ಲೂ ಮಿಂಚಿದ ಮಕ್ಕಳು ಸಿದ್ಧಾರೂಢ ಗುರುನಾಥರೂಢ, ಸಿದ್ದೇಶ್ವರ ಸ್ವಾಮೀಜಿ, ವಿವೇಕಾನಂದ, ರಾಮಕೃಷ್ಣ ಪರಮಹಂಸ, ಗುರು ರಾಘವೇಂದ್ರ, ಸಾವಿತ್ರಿಬಾಯಿ ಫುಲೆ, ಸಾಯಿಬಾಬಾ, ಗೌತಮ ಬುದ್ಧರ ವೇಷದಲ್ಲಿ ಕಂಗೊಳಿಸಿದರು.
ಮಕ್ಕಳನ್ನು ವಿವಿಧ ಗುರು-ಶಿಷ್ಯರ ವೇಷದಲ್ಲಿ ಕಂಡ ಪಾಲಕರು ಪುಳಕಗೊಂಡರು. ಗುರುಕುಲದ ಸೆಟ್‌ನಲ್ಲಿ ಪಾಠ ಪದ್ಧತಿಯ ರೂಪಕವನ್ನೂ ಪ್ರದರ್ಶಿಸಿದ ಮಕ್ಕಳು ಗುರು ಪೂರ್ಣಿಮೆ ಮಹತ್ವ ಸಾರಿದರು.
ಇದನ್ನೂ ಓದಿ: ಬಾಗಲಕೋಟೆಯಲ್ಲಿ ಆಷಾಢ ಗುಗ್ಗರಿ ಪರ್ವ; ಹೊಲದಲ್ಲಿ ಕುಳಿತು ಖಡಕ್ ರೊಟ್ಟಿ ಸವಿದ ಜನ - Bagalkote Guggari Parva