ಚಿಕ್ಕಮಗಳೂರು: 75ನೇ ಗಣರಾಜ್ಯೋತ್ಸವ ನಿಮಿತ್ತ ಫಲಪುಷ್ಪ ಪ್ರದರ್ಶನ - ವಿಡಿಯೋ
🎬 Watch Now: Feature Video
Published : Jan 26, 2024, 7:41 PM IST
ಚಿಕ್ಕಮಗಳೂರು : 75ನೇ ಗಣರಾಜ್ಯೋತ್ಸವ ನಿಮಿತ್ತ ತೋಟಗಾರಿಕೆ ಇಲಾಖೆ ಆವರಣದಲ್ಲಿ ಫಲಪುಷ್ಪ ಪ್ರದರ್ಶನ ಏರ್ಪಡಿಸಲಾಗಿದೆ. ಎಲ್ಲೆಲ್ಲೂ ಬಣ್ಣ ಬಣ್ಣದ ಚಿತ್ತಾರ, ಹೂಗಳ ರಾಶಿ, ಫಲಪುಷ್ಪಗಳಿಂದ ಅರಳಿದ ಕಲಾ ಕೃತಿಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಅದ್ಭುತ ಲೋಕದಂತಿರುವ ಫಲಪುಷ್ಪ ಪ್ರದರ್ಶನ ನೋಡಲು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ತೋಟಗಾರಿಕಾ ಇಲಾಖೆಗೆ ಭೇಟಿ ನೀಡಿ ಕಣ್ತುಂಬಿ ಕೊಳ್ಳುತ್ತಿದ್ದಾರೆ.
ಬೆಟ್ಟದಿಂದ ಬಟ್ಟಲಿಗೆ ಎಂಬ ಶೀರ್ಷಿಕೆಯಡಿ ಕಾಫಿ ಕುರಿತಂತೆ ಗಿರಿ ಶಿಖರದ ಪ್ರದರ್ಶನ ಮಾಡಿದ್ದು ಗಮನ ಸೆಳೆಯಿತು. ಇನ್ನು ವಿವಿಧ ಜಾತಿಯ ಹೂಗಳಿಂದ ಹಲವು ಪಕ್ಷಿ, ಪ್ರಾಣಿಗಳನ್ನು ನಿರ್ಮಿಸಲಾಗಿದೆ. ಅಲ್ಲದೇ, ಹಣ್ಣು ಮತ್ತು ತರಕಾರಿಗಳ ಮೇಲೆ ಮಹಾತ್ಮರ ಚಿತ್ರಗಳನ್ನು ಬಿಡಿಸಲಾಗಿದೆ. ಹಂಪಿಯ ಕಲ್ಲಿನ ರಥ ಮತ್ತು ನಟ ಪುನೀತ್ ರಾಜಕುಮಾರ್ ಅವರ ಕಲಾಕೃತಿಗಳು ಪುಷ್ಪಗಳಲ್ಲಿ ಮೂಡಿ ಬಂದಿರುವುದು ವಿಶೇಷವಾಗಿದೆ.
ಜೊತೆಗೆ ಹಣ್ಣು ತರಕಾರಿಗಳಿಂದ ಮಾಡಿದ ನವಿಲು ಹಾಗೂ ಡಾ. ರಾಜ್ ಕುಮಾರ್ ಅವರ ಬೇಡರ ಕಣ್ಣಪ್ಪನ ಪುತ್ಥಳಿ, ಪೂರ್ಣ ಕುಂಭ ಕಲಾಕೃತಿಗಳು ಹಾಗೂ ಮಲೆನಾಡ ಸುಂದರ ಪರಿಸರವನ್ನು ಇಲ್ಲಿ ಅನಾವರಣ ಮಾಡಲಾಗಿದೆ. ವಿವಿಧ ಪೇಂಟಿಂಗ್ಸ್ಗಳನ್ನು ಕೂಡ ಪ್ರದರ್ಶನಕ್ಕೆ ಇಡಲಾಗಿದೆ. ಮೀನುಗಾರಿಕೆ ಇಲಾಖೆಯೂ ಮೀನಿನ ತಳಿಗಳ ಬಗ್ಗೆ ಪರಿಚಯ ಮಾಡಿಕೊಡುವ ಪ್ರಯತ್ನಕ್ಕೆ ಮುಂದಾಗಿದೆ.
ಇದನ್ನೂ ಓದಿ : ಬಸವಣ್ಣನ ಜೀವನಾಧಾರಿತ ಫಲಪುಷ್ಪ ಪ್ರದರ್ಶನ ವೀಕ್ಷಿಸಲು ಬಂದ ಜನಸಾಗರ