WATCH VIDEO: ರಸ್ತೆಯಲ್ಲೇ 2 ಹಾವುಗಳ ಮಧ್ಯೆ ಕಾದಾಟ - Two Snakes Fight

🎬 Watch Now: Feature Video

thumbnail

By ETV Bharat Karnataka Team

Published : Apr 29, 2024, 11:08 AM IST

ಶ್ರೀನಗರ(ಉತ್ತರಾಖಂಡ): 2 ಹಾವುಗಳು ರಸ್ತೆಯ ನಡುವೆ ಕಾದಾಟ ನಡೆಸಿದ್ದು, ಸವಾರರು ಪಜೀತಿಗೊಳಗಾದ ಘಟನೆ ನಡೆದಿದೆ. ಶ್ರೀನಗರದಲ್ಲಿ ಡ್ಯಾಂ ಗೆ ಹೋಗುವ ರಸ್ತೆಯಲ್ಲಿ ಹಾವುಗಳೆರಡು ಬಡೆದಾಡಿಕೊಂಡಿವೆ. ಇವುಗಳ ಕಾದಾಟಕ್ಕೆ ರಸ್ತೆ ಸಂಚಾರವೇ ಸ್ಥಗಿತಗೊಂಡಿತು. ಅದೇ ಮಾರ್ಗದಲ್ಲಿ ಬಂದವರೆಲ್ಲ ಈ ಹಾವಿನ ಕಾಳಗವನ್ನು ನೋಡತೊಡಗಿದರು.  ನಾಗಿನ್​​​​, ಇಚ್ಚಾ ಧಾರಿ ನಾಗಿಣ್​, ಮಣಿ ಧಾರಿ ನಾಗ್ ಎಂದು ಕರೆಯಲು ಪ್ರಾರಂಭಿಸಿದರು. ಅದರಲ್ಲೊಬ್ಬ ವ್ಯಕ್ತಿ ಹಾವಿನ ಕಾಳಗದ ದೃಶ್ಯವನ್ನು ತನ್ನ ಮೊಬೈಲ್​ನಲ್ಲಿ ವಿಡಿಯೋ ಮಾಡಿದ್ದಾನೆ. ಇದೀಗ ಅದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. 

ಉತ್ತರಾಖಂಡದ ಕಾಡುಗಳಲ್ಲಿ ಕಾಳ್ಗಿಚ್ಚಿನಂತಹ ಪರಿಸ್ಥಿತಿಯಿದ್ದು, ಕಾಡು ಪ್ರಾಣಿಗಳ ಜೀವಕ್ಕೆ ಹೆಚ್ಚಿನ ಅಪಾಯವಿದೆ. ಇದೇ ಕಾರಣಕ್ಕೆ ಕಾಡು ಜೀವಿಗಳು ಹೊರ ಬರುತ್ತಿವೆ. ಈ ಹಾವುಗಳು ಬಹುಶಃ ಬೆಂಕಿಯಿಂದ ತಪ್ಪಿಸಿಕೊಳ್ಳಲು ಕಾಡಿನಿಂದ ಹೊರಬಂದಿರಬಹುದೆಂದು ಸಾರ್ವಜನಿಕರು ಹೇಳಿದ್ದಾರೆ. ಈ ಹಾವುಗಳು ಈಗಾಗಲೇ ಹಲವರ ಪ್ರಾಣ ತಿಂದಿದೆ. ಹೌದು ಉತ್ತರಾಖಂಡದಲ್ಲಿ ಕಳೆದ ಮೂರು ವರ್ಷಗಳಲ್ಲಿ ಹಾವು ಕಡಿತದಿಂದ 85 ಮಂದಿ ಸಾವನ್ನಪ್ಪಿದ್ದಾರೆ. ಹಾವು ಕಡಿತದಿಂದ 369 ಮಂದಿ ಗಾಯಗೊಂಡಿದ್ದಾರೆ. 

2021 ರಲ್ಲಿ ಹಾವು ಕಡಿತದಿಂದ 30 ಜನರು ಸಾವನ್ನಪ್ಪಿದ್ದರೆ, 119 ಜನರು ಹಾವು ಕಡಿತದಿಂದ ಆಸ್ಪತ್ರೆಗೆ ದಾಖಲಾಗಿದ್ದರು. 2022 ರಲ್ಲಿ ಹಾವು ಕಡಿತದಿಂದ 30 ಜನರು ಸಾವನ್ನಪ್ಪಿದ್ದರು ಮತ್ತು 113 ಜನರು ಗಾಯಗೊಂಡರು. 2023 ರಲ್ಲಿ, ಹಾವಿನ ವಿಷದಿಂದ 25 ಜನರು ಸಾವನ್ನಪ್ಪಿದ್ದರು ಮತ್ತು 137 ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪಿತೋರಗಢ ಜಿಲ್ಲೆಯಲ್ಲಿ ಅತಿ ಹೆಚ್ಚು 90 ಹಾವು ಕಡಿತ ಪ್ರಕರಣಗಳು ದಾಖಲಾಗಿವೆ. ಉತ್ತರಾಖಂಡದ ತೇರಾಯ್ ಪೂರ್ವ ಪ್ರದೇಶದಲ್ಲಿ ಹಾವು ಕಡಿತದಿಂದ 24 ಮಂದಿ ಸಾವನ್ನಪ್ಪಿದ್ದಾರೆ.

ಇದನ್ನೂ ಓದಿ: ಮೇಕೆ ಮೇಯಿಸುತ್ತಿದ್ದ ವೃದ್ಧೆಯ ಕಾಲಿಗೆ ಕಚ್ಚಿ ತೀವ್ರವಾಗಿ ಗಾಯಗೊಳಿಸಿದ ಮೊಸಳೆ - CROCODILE ATTACK

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.