ಮೈಸೂರು: ನಗರದಲ್ಲಿರುವ ಜಾರಿ ನಿರ್ದೇಶನಾಲಯ (ಇ.ಡಿ.) ಕಚೇರಿಗೆ ಮುಡಾ ಪ್ರಕರಣದ ವಿಚಾರಣೆಗೆ ಹಾಜರಾದ ಸಾಮಾಜಿಕ ಹೋರಾಟಗಾರ ಗಂಗರಾಜು ಮಾಧ್ಯಮಗಳೊಂದಿಗೆ ಮಾತನಾಡಿದರು.
"ವಿಚಾರಣೆಗೆ ಹಾಜರಾಗುವಂತೆ ನನಗೆ ಇಡಿ ನೋಟಿಸ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಬುಧವಾರ ಇಡಿ ಕಚೇರಿಗೆ ಹಾಜರಾದೆ. ನಾನು ಮುಡಾದ 50:50 ಅನುಪಾತದ ಅಕ್ರಮ ಸೈಟ್ ಹಂಚಿಕೆ ಸಂಬಂಧ ಹಲವರ ಮೇಲೆ ದೂರು ನೀಡಿದ್ದೇನೆ. ಇದರ ಬಗ್ಗೆ ದಾಖಲೆಗಳನ್ನು ಪಡೆದುಕೊಳ್ಳಲು ಹಾಗೂ ಖಚಿತ ಮಾಹಿತಿ ಪಡೆಯಲು ವಿಚಾರಣೆ ಕರೆದಿದ್ದರು. ವಿಚಾರಣೆಯಲ್ಲಿ ಎಲ್ಲಾ ಮಾಹಿತಿ ನೀಡಿದ್ದೇನೆ. ಮುಡಾದ ಅಕ್ರಮದಲ್ಲಿ ಹಣ ವರ್ಗಾವಣೆ ಬಗ್ಗೆ ಮಾಹಿತಿ ನೀಡಿದ್ದೇನೆ. ಲೋಕಾಯುಕ್ತ ದಾಳಿಯ ಸಂದರ್ಭದಲ್ಲಿ ಕೆಲವು ವಿಚಾರಗಳು ಮೊದಲೇ ಲೀಕ್ ಆಗಿವೆ. ಇದರಲ್ಲಿ ಹಣ ವರ್ಗಾವಣೆಯ ಬಗ್ಗೆ ಮುಡಾದ ಅಧಿಕಾರಿಯೇ ನನಗೆ ದಾಖಲೆ ಕೊಟ್ಟಿದ್ದರು. ಅವುಗಳನ್ನೂ ಕೊಟ್ಟಿದ್ದೇನೆ. ಜೊತೆಗೆ, ಮುಡಾದಲ್ಲಿ ನಡೆಯುತ್ತಿರುವ ಭ್ರಷ್ಟಚಾರದ ಹಣ ವರ್ಗಾವಣೆ ಬಗ್ಗೆಯೂ ತಿಳಿಸಿದ್ದೇನೆ. ಇಡಿ ತನಿಖೆ ಪಾರದರ್ಶಕವಾಗಿ ನಡೆಯುತ್ತಿದೆ. ನ್ಯಾಯ ಸಿಗುವ ಭರವಸೆ ಇದೆ ಎಂದರು.
ಇದನ್ನೂ ಓದಿ: ಮುಡಾ ಪ್ರಕರಣ: ಲೋಕಾಯುಕ್ತ ವಿಚಾರಣೆಗೆ ಹಾಜರಾದ ಮುಡಾ ಮಾಜಿ ಆಯುಕ್ತ ಕಾಂತರಾಜು