Google AI GenChess: ಜಾಗತಿಕ ಟೆಕ್ ದೈತ್ಯ ಗೂಗಲ್ ಆನ್‌ಲೈನ್ ಚೆಸ್ ಪ್ಲಾಟ್‌ಫಾರ್ಮ್ ಪ್ರಾರಂಭಿಸಿದೆ. ಇದಕ್ಕೆ 'ಜೆನ್‌ಚೆಸ್' ಎಂದು ಹೆಸರಿಟ್ಟಿದೆ. ಇಲ್ಲಿ ಆಟಗಾರರು ತಮ್ಮ ಚೆಸ್ ಕಾಯಿನ್ಸ್ ಅನ್ನು ಎಐ(ಕೃತಕ ಬುದ್ಧಿಮತ್ತೆ) ಸಹಾಯದಿಂದ ಕಸ್ಟಮೈಸ್ ಮಾಡಬಹುದು. ಕಸ್ಟಮ್ ಮಾಡಿದ ಚೆಸ್ ಕಾಯಿನ್ಸ್ ಅನ್ನು ಕ್ರಿಯೆಟ್ ಮಾಡಲು ಗೂಗಲ್ನ ಜೆಮಿನಿ ಇಮೇಜನ್ 3 ಮಾಡೆಲ್ ಬಳಸಿಕೊಳ್ಳುತ್ತದೆ.
ಉದಾಹರಣೆಗೆ, ನಿಮ್ಮ ವೈಟ್ ಚೆಸ್ ಕಾಯಿನ್ಸ್ಗೆ ನೀವು ಸೈನ್ಟಿಫಿಕ್ ಥೀಮ್ ಆಯ್ಕೆ ಮಾಡಿದರೆ, ಎಐ ಬ್ಲ್ಯಾಕ್ ಚೆಸ್ ಕಾಯಿನ್ಸ್ಗೆ ಸಂಬಂಧಿಸಿದ ವಿಭಿನ್ನ ಥೀಮ್ ಕ್ರಿಯೆಟ್ ಮಾಡುತ್ತದೆ. GenChessನೊಂದಿಗೆ ಸಂಭಾವ್ಯ ಸಂಯೋಜನೆಗಳು ವಾಸ್ತವಿಕವಾಗಿ ಅಪರಿಮಿತ. ಇದು ಹೆಚ್ಚು ತೊಡಗಿಸಿಕೊಳ್ಳುವ ಮತ್ತು ದೃಷ್ಟಿಗೆ ಉತ್ತೇಜಕ ಚೆಸ್ ಅನುಭವ ನೀಡುತ್ತದೆ ಎಂದು ಗೂಗಲ್ ಹೇಳಿದೆ.
ಕಸ್ಟಮೈಸೇಶನ್: GenChess ಕ್ಲಾಸಿಕ್ ಮತ್ತು ಕ್ರಿಯೆಟಿವ್ ಎಂಬ ಎರಡು ಶೈಲಿಗಳನ್ನು ಹೊಂದಿದೆ. ಕ್ಲಾಸಿಕ್ ಶೈಲಿಯು ಸಾಂಪ್ರದಾಯಿಕ ಚೆಸ್ ಸೆಟ್ ಹೋಲುತ್ತದೆ. ಆದರೆ ಕ್ರಿಯೆಟಿವ್ ಶೈಲಿ ಹೆಚ್ಚು ಅದ್ಭುತವಾಗಿದೆ. ಇಲ್ಲಿ ಎಐ ಸಂಪೂರ್ಣ ಸೆಟ್ ಕ್ರಿಯೆಟ್ ಮಾಡುತ್ತದೆ. ಆಟಗಾರರು ಇದರಿಂದ ತೃಪ್ತರಾಗದಿದ್ದರೆ ಪ್ರತ್ಯೇಕವಾಗಿ ಚೆಸ್ ಕಾಯಿನ್ಸ್ ಎಡಿಟ್ ಮಾಡಬಹುದು.
ಉದಾಹರಣೆಗೆ, ರಾಜ, ರಾಣಿ ಅಥವಾ ಸೈನಿಕನಂತಹ ನಿರ್ದಿಷ್ಟ ಕಾಯಿನ್ಗಳ ನೋಟವನ್ನು ಪರಿಷ್ಕರಿಸಲು GenChess ಹೆಚ್ಚುವರಿ ಟೆಕ್ಸ್ಟ್ ಪ್ರಾಂಪ್ಟ್‌ಗಳನ್ನು ಒದಗಿಸುತ್ತದೆ.
GenChess ಆಡುವುದು ಹೇಗೆ?: GenChess ಆಡಲು https://labs.google/genchessಗೆ ಭೇಟಿ ನೀಡಿ. ಅಲ್ಲಿ ನಿಮ್ಮ ಜಿಮೇಲ್ ಖಾತೆಯೊಂದಿಗೆ ಸೈನ್ ಇನ್ ಆಗಿ. ಜನರೇಟ್ ಎಂಬ ಬಟನ್ ಮೇಲೆ ಕ್ಲಿಕ್ ಮಾಡಿ. ಈಗ ಚೆಸ್ ಸೆಟ್‌ಗಾಗಿ ನಿಮ್ಮ ಆದ್ಯತೆಯ ಥೀಮ್ ಅನ್ನು ನಮೂದಿಸಿ.
ಇಲ್ಲಿ ಕೆಲವೊಂದು ನಿಯಮಗಳಿವೆ. ಅದರ ಪ್ರಕಾರ ನೀವು ಮುಂದುವರಿಯಬೇಕು. ಅಲ್ಲದೆ, ಇದು ಪ್ರಸ್ತುತ ಸೀಮಿತ ಪ್ರದೇಶಗಳಲ್ಲಿ ಮಾತ್ರ ಲಭ್ಯ.
GenChess 2024ರ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಅನ್ನು ಹೋಲುತ್ತದೆ. ಈ ಚಾಂಪಿಯನ್ಶಿಪ್ನಲ್ಲಿ ಹಾಲಿ ಚಾಂಪಿಯನ್ ಚೀನಾದ ಡಿಂಗ್ ಲಿರೆನ್ ಮತ್ತು ಭಾರತದ ಗುಕೇಶ್ ದೊಮ್ಮರಾಜು ಸೆಣಸಾಟ ನಡೆಸುತ್ತಿದ್ದಾರೆ. ಈವೆಂಟ್‌ನ ಮುಖ್ಯ ಪ್ರಾಯೋಜಕರಾಗಿರುವ ಗೂಗಲ್ ಹಲವಾರು ಹೊಸ ಚೆಸ್ ಉತ್ಪನ್ನಗಳು ಮತ್ತು ಉಪಕ್ರಮಗಳನ್ನು ಘೋಷಿಸಲು ಈ ಅವಕಾಶವನ್ನು ಪಡೆದುಕೊಂಡಿದೆ. ಡೇಟಾ ಸೈನ್ಸ್ ಮತ್ತು ಮಷಿನ್ ಲರ್ನಿಂಗ್ ಇಂಜಿನಿಯರ್‌ಗಳಿಗಾಗಿ ಗೂಗಲ್-ಮಾಲೀಕತ್ವದ ವೇದಿಕೆಯಾದ Kaggleನಲ್ಲಿ ಕೋಡಿಂಗ್ ಸವಾಲಿಗೆ ಇಂಟರ್ನ್ಯಾಷನಲ್ ಚೆಸ್ ಫೆಡರೇಶನ್ (FIDE) ನೊಂದಿಗೆ ಸಹಭಾಗಿತ್ವವನ್ನು ಒಳಗೊಂಡಿದೆ.
ಮುಂಬರುವ ಫೀಚರ್ಗಳಿವು: GenChess ಜೊತೆಯಲ್ಲಿ ಜೆಮಿನಿಯೊಳಗೆ ಚೆಸ್ ಬೋಟ್‌ನ ಸನ್ನಿಹಿತ ಪರಿಚಯವನ್ನು ಗೂಗಲ್ ಘೋಷಿಸಿದೆ. ಈ ವೈಶಿಷ್ಟ್ಯವು ಆಟಗಾರರು ತಮ್ಮ ಮೂವ್ಗಳನ್ನು ಟೈಪ್ ಮಾಡುವ ಮೂಲಕ ಆಡಲು ಅವಕಾಶ ನೀಡುತ್ತದೆ. ಆಟವು ಮುಂದುವರೆದಂತೆ ಜೆಮಿನಿ ಅಪ್ಡೇಟ್ಡ್ ಚೆಸ್ ಬೋರ್ಡ್ ಅನ್ನು ತೋರಿಸುತ್ತದೆ. ಆದರೂ ಈ ಹೊಸ ವೈಶಿಷ್ಟ್ಯವು ಡಿಸೆಂಬರ್‌ನಿಂದ ಪ್ರಾರಂಭವಾಗುವ ಜೆಮಿನಿ ಸುಧಾರಿತ ಚಂದಾದಾರರಿಗೆ ಮಾತ್ರ ಲಭ್ಯವಿರುತ್ತದೆ ಎಂಬುದನ್ನು ಗಮನಿಸಿ.
ಇದನ್ನೂ ಓದಿ: 16 ವರ್ಷದೊಳಗಿನ ಮಕ್ಕಳಿಗೆ ಆಸ್ಟ್ರೇಲಿಯಾದಲ್ಲಿ ಸೋಷಿಯಲ್ ಮೀಡಿಯಾ ಬ್ಯಾನ್