ಧುಮ್ಮಿಕ್ಕಿ ಹರಿಯುತ್ತಿದೆ ವಿಶ್ವಪ್ರಸಿದ್ಧ ಧೂದ್ ಸಾಗರ್​​ ಜಲಪಾತ: ಡ್ರೋಣ್ ಕ್ಯಾಮರಾದಲ್ಲಿ ಅದ್ಭುತ ದೃಶ್ಯ ಸೆರೆ - Dudhsagar Waterfall - DUDHSAGAR WATERFALL

🎬 Watch Now: Feature Video

thumbnail

By ETV Bharat Karnataka Team

Published : Jul 23, 2024, 4:56 PM IST

ಬೆಳಗಾವಿ: ವಿಶ್ವಪ್ರಸಿದ್ಧ ಧೂದ್ ಸಾಗರ್​​ ಜಲಪಾತದ ಅದ್ಭುತ ಪ್ರಕೃತಿ ಸೌಂದರ್ಯ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಜಲಪಾತದ ರಮಣೀಯ ಸೊಬಗಿಗೆ ಪ್ರವಾಸಿಗರು ಫಿದಾ ಆಗಿದ್ದಾರೆ.

ಹೌದು, ಕರ್ನಾಟಕ ಮತ್ತು ಗೋವಾ ಗಡಿಯಲ್ಲಿ ಬರುವ ಈ ಜಲಪಾತವು ಮಳೆಗಾಲ ಆರಂಭವಾಗುತ್ತಿದ್ದಂತೆ, ದಟ್ಟ ಅರಣ್ಯ ಪ್ರದೇಶದಲ್ಲಿ ಹಾಲ್ನೋರೆಯಂತೆ ಹರಿಯುತ್ತದೆ. ಧುಮ್ಮಿಕ್ಕುತ್ತಿರುವ ಈ ಜಲಪಾತದ ದೃಶ್ಯ ವೈಭವ ನೋಡುವುದೇ ಕಣ್ಣಿಗೆ ಹಬ್ಬ. ಪಶ್ಚಿಮಘಟ್ಟ ಪ್ರದೇಶದಲ್ಲಿ ಮಳೆ ಸುರಿಯುತ್ತಿದ್ದು, ಜಲಪಾತಕ್ಕೆ ಇದೀಗ ಜೀವಕಳೆ ಬಂದಿದೆ. ಹೆಸರಿಗೆ ತಕ್ಕಹಾಗೆ ಹಾಲಿನ ನೊರೆಯಂತೆ ಕಂಗೊಳಿಸುತ್ತಿರುವ ಈ ಕ್ಷಣ ಕಣ್ತುಂಬಿಕೊಳ್ಳಲು ಎರಡು ಕಣ್ಣು ಸಾಲದು.

ಮಹದಾಯಿ ನದಿಯಿಂದ ಉದ್ಭವಿಸುವ ಧೂದ್ ಸಾಗರದಲ್ಲಿ ಮಂಜಿನಾಟದ ಮನಮೋಹಕ ದೃಶ್ಯಕ್ಕೆ ಪ್ರವಾಸಿಗರು ಫಿದಾ ಆಗಿದ್ದಾರೆ. ಬೆಳಗಾವಿಯಿಂದ 80 ಕಿ.ಮೀ ದೂರದಲ್ಲಿರುವ ಧೂದ್ ಸಾಗರ್​​ ಜಲಪಾತವೂ ಭಾರತದ ಅತ್ಯಂತ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ. ಕರ್ನಾಟಕ ಮತ್ತು ಗೋವಾ ರಾಜ್ಯಗಳ ನಡುವಿನ ಗಡಿಯನ್ನೂ ಧೂದ್ ಸಾಗರ್​ ಜಲಪಾತ ರೂಪಿಸಲಿದ್ದು, ಭೂಲೋಕದ ಸ್ವರ್ಗಕ್ಕೆ ಇನ್ನೊಂದು ಹೆಸರೇ ಧೂದ್ ಸಾಗರ್ ಜಲಪಾತ ಎಂದೇ ಪ್ರಖ್ಯಾತಿ ಪಡೆದಿದೆ. ದಟ್ಟ ಕಾಡಿನಿಂದ ಸುತ್ತುವರಿದಿರುವ ಧೂದ್ ಸಾಗರ ಜಲಪಾತದ ರುದ್ರ ರಮಣೀಯ ದೃಶ್ಯ ಸದ್ಯ ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಇದನ್ನೂ ಓದಿ: ಕಾಫಿನಾಡಲ್ಲಿ ಮಳೆ ಅಬ್ಬರ: ರಸ್ತೆ ಕುಸಿದು ಪ್ರಪಾತಕ್ಕೆ ಬಿದ್ದ ಲಾರಿ; ನೀರಿನಲ್ಲಿ ಕೊಚ್ಚಿಹೋದ ಕೋಣ - LORRY FALLS INTO ABYSS

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.