ರಸ್ತೆ ದಾಟಲು ಕಾಡಾನೆಗಳ ಪರದಾಟ-ವಿಡಿಯೋ
🎬 Watch Now: Feature Video
Published : Jan 21, 2024, 9:02 AM IST
ಆನೇಕಲ್(ಬೆಂಗಳೂರು): ಕೋಣನಕುಂಟೆ ಕ್ರಾಸ್ನ ನೈಸ್ ರಸ್ತೆಯಲ್ಲಿ ಕಾಡಾನೆಗಳ ಹಿಂಡು ರಸ್ತೆ ದಾಟಲು ಪರದಾಟ ನಡೆಸಿರುವ ವಿಡಿಯೋ ದೊರೆತಿದೆ. ವನ್ಯಜೀವಿಗಳನ್ನು ಗಮನದಲ್ಲಿಟ್ಟುಕೊಂಡು ಸವಾರರು ನಿಧಾನವಾಗಿ ವಾಹನ ಚಲಾಯಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ. ಆನೆಮರಿಗಳು ಕೂಡಾ ಈ ಹಿಂಡಿನಲ್ಲಿದ್ದವು. ಹೀಗಾಗಿ ರಸ್ತೆ ದಾಟಲು ತೊಂದರೆ ಅನುಭವಿಸಿವೆ.
ನೈಸ್ ರಸ್ತೆಯಲ್ಲಿ ವೇಗವಾಗಿ ಚಲಿಸುವ ವಾಹನಗಳ ರಭಸಕ್ಕೆ ಆನೆಗಳು ತಬ್ಬಿಬ್ಬಾಗಿ ರಸ್ತೆ ಪಕ್ಕದಲ್ಲಿ ನಿಂತಿರುವ ದೃಶ್ಯವನ್ನು ಸ್ಥಳೀಯ ನಿವಾಸಿಗಳು ಮೊಬೈಲ್ನಲ್ಲಿ ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಈ ವಿಡಿಯೋ ಗಮನಿಸಿ ತಕ್ಷಣ ಎಚ್ಚೆತ್ತುಕೊಂಡಿರುವ ಅರಣ್ಯಾಧಿಕಾರಿಗಳು ಹಾಗು ಕೋಣನಕುಂಟೆ ಪೊಲೀಸರು ರಸ್ತೆ ಸಂಚಾರಿಗಳಿಗೆ ನಿಧಾನವಾಗಿ ವಾಹನ ಚಲಿಸುವಂತೆ ಮನವಿ ಮಾಡಿದ್ದಾರೆ.
ಶನಿವಾರ ರಾತ್ರಿ ಆನೆಗಳು ರಸ್ತೆ ದಾಟಿ ನಗರದತ್ತ ಹೆಜ್ಜೆ ಹಾಕಿದ್ದವು. ಸಾಮಾನ್ಯವಾಗಿ ತಾವು ಬಂದ ಜಾಡು ಹಿಡಿದು ಹೋಗುವ ಕಾಡಾನೆಗಳನ್ನು ಮತ್ತೆ ಕಾಡು ಸೇರಿಸುವಲ್ಲಿ ಕಲ್ಕೆರೆ ಅರಣ್ಯಾಧಿಕಾರಿಗಳು ಹಾಗು ಸಂಚಾರ ಪೊಲೀಸರು ಯಶಸ್ವಿಯಾಗಿದ್ದಾರೆ. ಆನೆಗಳಿಂದ ಯಾವುದೇ ಆಸ್ತಿ ಪಾಸ್ತಿಗೆ ಹಾನಿಯಾಗಿಲ್ಲ.
ಇದನ್ನೂ ಓದಿ: ನಾಡಿನತ್ತ ಕಾಡಾನೆಗಳ ಸವಾರಿ: ಚಾಮರಾಜನಗರ ಗಡಿ ಗ್ರಾಮಗಳಲ್ಲಿ ಬೆಳೆನಾಶದ ಭೀತಿ