Watch.. ರಾಷ್ಟ್ರ ರಾಜಧಾನಿಯಲ್ಲಿ ನೀರಿಗೆ ಹಾಹಾಕಾರ: ಟ್ಯಾಂಕರ್ ಬಳಿ ಸರತಿ ಸಾಲಿನಲ್ಲಿ ನಿಂತ ಜನರು - Delhi Water Crisis - DELHI WATER CRISIS
🎬 Watch Now: Feature Video
Published : Jun 13, 2024, 9:18 AM IST
|Updated : Jun 13, 2024, 10:30 AM IST
ನವದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ನೀರಿನ ಸಮಸ್ಯೆ ಮುಂದುವರಿದಿದೆ. ಚಾಣಕ್ಯಪುರಿಯ ವಿವೇಕಾನಂದ ಕ್ಯಾಂಪ್‌ನಲ್ಲಿ ನೀರು ತುಂಬಿಸಲು ಜನರು ನೀರಿನ ಟ್ಯಾಂಕರ್ ಬಳಿ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. ಹಲವೆಡೆ ನೀರಿನ ಸಮಸ್ಯೆ ಎದುರಾಗಿದ್ದು, ಪೂರ್ವ ದೆಹಲಿಯ ಗೀತಾ ಕಾಲೋನಿ ಪ್ರದೇಶದಲ್ಲಿ ನೀರು ತುಂಬಿಸಲು ಜನರು ನೀರಿನ ಟ್ಯಾಂಕರ್ ಬಳಿ ಸರತಿ ಸಾಲಿನಲ್ಲಿ ನಿಂತಿದ್ದರು.
ಸ್ಥಳೀಯ ಮಹಿಳೆಯೊಬ್ಬರು ಮಾತನಾಡಿ, ಇಲ್ಲಿ ನೀರಿಲ್ಲದೇ ಭಾರಿ ಸಮಸ್ಯೆ ಎದುರಾಗಿದೆ. ಟ್ಯಾಂಕರ್ ಬಳಿ ಸರತಿ ಸಾಲಿನಲ್ಲಿ ನಿಂತು ನೀರು ಹಿಡಿಯಬೇಕಾಗಿದೆ. ಈ ವೇಳೆ ಗಲಾಟೆ, ಹೊಡೆದಾಟವೂ ನಡೆಯುತ್ತದೆ. ನೀರಿಗೆ ಬೇರೆ ವ್ಯವಸ್ಥೆ ಇಲ್ಲ. ಟ್ಯಾಂಕರ್ ನೀರನ್ನೇ ಅವಲಂಬಿಸಿದ್ದೇವೆ. ನಾವು ಬಡವರು, ನೀರಿಗಾಗಿ ಕಷ್ಟ ಪಡುತ್ತಿದ್ದೇವೆ. ನೀರು ಸಾಕಾಗುವುದಿಲ್ಲ ಎಂದು ಅಸಮಾಧಾನ ಹೊರಹಾಕಿದ್ದಾರೆ.