ಮೈಸೂರು: ಮುಖ್ಯರಸ್ತೆಯಲ್ಲಿ ಮೊಸಳೆ ಪ್ರತ್ಯಕ್ಷ!- ವಿಡಿಯೋ - Crocodile Found On Main Road - CROCODILE FOUND ON MAIN ROAD
🎬 Watch Now: Feature Video
Published : Aug 12, 2024, 4:18 PM IST
ಮೈಸೂರು: ಇಲ್ಲಿನ ಕಂಬದಕೊಲ್ಲಿ ಗ್ರಾಮದ ಮುಖ್ಯರಸ್ತೆಯಲ್ಲಿ ಮೊಸಳೆ ಕಂಡುಬಂದಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ನಂಜನಗೂಡು ತಾಲೂಕಿನ ಕಂಬದಕೊಲ್ಲಿ ಮತ್ತು ಹುಲ್ಲಹಳ್ಳಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ. ವ್ಯಕ್ತಿಯೊಬ್ಬರು ತನ್ನ ಸ್ನೇಹಿತರೊಂದಿಗೆ ಕಾರಿನಲ್ಲಿ ಹೋಗುತ್ತಿದ್ದಾಗ ಮೊಸಳೆ ಕಂಡಿದೆ. ಕಾರು ಚಾಲಕ ನಡುರಸ್ತೆಯಲ್ಲಿ ಪ್ರತ್ಯಕ್ಷವಾದ ಮೊಸಳೆ ಕಂಡು ತಕ್ಷಣ ಕಾರು ನಿಲ್ಲಿಸಿ, ಮೊಬೈಲ್ ಕ್ಯಾಮರಾದಲ್ಲಿ ದೃಶ್ಯ ಸೆರೆ ಹಿಡಿದಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಮೊಸಳೆ ರಸ್ತೆ ದಾಟುತ್ತಿರುವ ವಿಡಿಯೋ ವೈರಲ್ ಆಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿರುವ ಸ್ಥಳೀಯರು, ಕೂಡಲೇ ಮೊಸಳೆ ಸೆರೆಹಿಡಿಯಬೇಕು ಎಂದು ಒತ್ತಾಯಿಸಿದ್ದಾರೆ.
ಇತ್ತೀಚೆಗೆ, ಉಡುಪಿಯ ಬೈಂದೂರು ತಾಲೂಕಿನ ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗೂರಿನ ಬಾವಿಯಲ್ಲಿ ಮೊಸಳೆ ಕಾಣಿಸಿಕೊಂಡಿತ್ತು. ಅರಣ್ಯ ಇಲಾಖೆ ಮಾರ್ಗದರ್ಶನದಲ್ಲಿ ಸತತ ಒಂದು ದಿನದ ಕಾರ್ಯಾಚರಣೆ ಬಳಿಕ ಅದನ್ನು ಸೆರೆ ಹಿಡಿಯುವ ಮೂಲಕ ಆತಂಕ ದೂರಮಾಡಲಾಗಿತ್ತು.
ಇದನ್ನೂ ಓದಿ: ನಾಗೂರಿನ ಬಾವಿಯಲ್ಲಿ ಪತ್ತೆಯಾಗಿದ್ದ ಮೊಸಳೆ: ಸತತ ಒಂದು ದಿನದ ಕಾರ್ಯಚರಣೆ ಬಳಿಕ ಕೊನೆಗೂ ಸೆರೆ - Finally Crocodile captured