ಧಾರವಾಡ: ಪೊಲೀಸರು ಗಸ್ತು ತಿರುಗುವ ವೇಳೆ ಹೆಡೆ ಎತ್ತಿ ಬುಸುಗುಟ್ಟಿದ ನಾಗಪ್ಪ - ವಿಡಿಯೋ - snake caught the eye of the police - SNAKE CAUGHT THE EYE OF THE POLICE

🎬 Watch Now: Feature Video

thumbnail

By ETV Bharat Karnataka Team

Published : May 25, 2024, 1:41 PM IST

ಧಾರವಾಡ: ರಾತ್ರಿ ಗಸ್ತು ತಿರುಗುವ ವೇಳೆ ಪೊಲೀಸರಿಗೆ ನಾಗರಹಾವು ಎದುರಾದ ಘಟನೆ ಧಾರವಾಡದಲ್ಲಿ ನಡೆದಿದೆ. ನಗರದಲ್ಲಿ ಗಸ್ತು ತಿರುಗುವ ವೇಳೆ ಹಾವು ಎದುರಾಗಿದೆ. ನಗರದ ಬೂಸಪ್ಪ ಚೌಕ್ ಬಳಿಯ ಬಡಾವಣೆಯಲ್ಲಿ ಗಸ್ತು ತಿರುಗುವ ವೇಳೆ ಎದುರಿಗೆ ಬಂದಿದೆ. 

ಹಾವು ನೋಡಿದ ಪೊಲೀಸರು ವಿಡಿಯೋ ಮಾಡಿದ್ದಾರೆ. ಈ ವೇಳೆ ಬೀದಿಯಲ್ಲಿ ಹೆಡೆಎತ್ತಿ ನಿಂತಿದ್ದ ನಾಗರಹಾವನ್ನು ನೋಡಿದ ಪೊಲೀಸರು ಉರಗ ಪ್ರೇಮಿಗಳಿಗೆ ಮಾಹಿತಿ ನೀಡಿದ ಬಳಿಕ ಸೆರೆ ಹಿಡಿದು ಸುರಕ್ಷಿತ ಸ್ಥಳಕ್ಕೆ ಬಿಟ್ಟಿದ್ದಾರೆ. 

ಇತ್ತೀಚಿನ ಘಟನೆ, ಬೆಡ್​ ರೂಮಿಗೆ ಬಂದು ಮಲಗಿದ್ದ ನಾಗರ ಹಾವು: ಬೆಡ್​ ರೂಮಿಗೆ ಬಂದು ಮಲಗಿದ್ದ ನಾಗರಹಾವನ್ನು ಸುರಕ್ಷಿತವಾಗಿ ಸೆರೆಹಿಡಿದ್ದ ಘಟನೆ ಮೈಸೂರು ನಗರದ ಚೆನ್ನಮ್ಮ ವೃತ್ತದ ಬಳಿ ಇತ್ತೀಚೆಗೆ ನಡೆದಿತ್ತು. ಹೆಬ್ಬಾಳ‌ದ 2ನೇ ಹಂತದಲ್ಲಿರುವ ಪ್ರಜ್ವಲ್ ಎಂಬವರ ಮನೆಯೊಳಗೆ ಬಂದ ಸರ್ಪ, ಅವರು ಮಲಗಿದ್ದ ಹಾಸಿಗೆಯ ಮೇಲೆಯೇ ಮಲಗಿಕೊಂಡಿತ್ತು. ಕೊಠಡಿಯಲ್ಲಿ ತಾನು ಮಲಗಿದ್ದ ಪಕ್ಷದಲ್ಲೇ ಬುಸುಗುಡುತ್ತಿದ್ದ ಸದ್ದು ಕೇಳಿಸಿತ್ತು. ಈ ಶಬ್ದದಿಂದ ಎಚ್ಚರಗೊಂಡ ಯುವಕ ಪ್ರಜ್ವಲ್, ಅನುಮಾನದಿಂದ ಹಾಸಿಗೆ ತೆಗೆದಾಗ ನಾಗರ ಹಾವು ಇತ್ತು. ಹೆಡೆ ಎತ್ತಿದ ನಾಗರ ಹಾವು ನೋಡಿದ ತಕ್ಷಣವೇ ಪ್ರಜ್ವಲ್ ಮನೆಯಿಂದ ಹೊರ ಓಡಿ ಹೋಗಿದ್ದನು. ಸುದ್ದಿ ತಿಳಿದು ಸ್ಥಳಕ್ಕೆ ಬಂದ ಉರಗತಜ್ಞ ಸ್ನೇಕ್ ಶ್ಯಾಮ್ ಅವರು ಸುರಕ್ಷಿತವಾಗಿ ಹಾವನ್ನು ಹಿಡಿದಿದ್ದಾರೆ.  

ಇದನ್ನೂ ಓದಿ: ಬೆಳಗಾವಿಯಲ್ಲಿ ಟಿಸಿ ಏರಿ ಆತಂಕ ಮೂಡಿಸಿದ ಯುವಕ; ಯುವಕನ ಹುಚ್ಚಾಟಕ್ಕೆ ಬೆಚ್ಚಿಬಿದ್ದ ಜನ - young man sitting on TC

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.