ಟಿವಿ ನೋಡ್ತಾ ಹಾಯಾಗಿ ಮಲಗಿದ್ದ ವೃದ್ಧನ ಎದೆ ಏರಿ ಕುಳಿತ ನಾಗರಹಾವು! - ಶಿವಮೊಗ್ಗ
🎬 Watch Now: Feature Video
Published : Feb 5, 2024, 10:08 PM IST
ಶಿವಮೊಗ್ಗ: ಮನೆಯಲ್ಲಿ ಟಿವಿ ನೋಡುತ್ತಾ ಹಾಯಾಗಿ ಮಲಗಿದ್ದ ವೃದ್ಧನ ಎದೆ ಮೇಲೆ ನಾಗರಹಾವು ಕುಳಿತುಕೊಂಡ ಘಟನೆ ಶಿವಮೊಗ್ಗದ ಮಲವಗೊಪ್ಪ ಬಡಾವಣೆಯಲ್ಲಿ ನಡೆದಿದೆ. ಭೈರಪ್ಪ ಎಂಬವರು ತಮ್ಮ ಮನೆಯಲ್ಲಿ ಟಿವಿ ನೋಡುತ್ತಾ ಮಂಚದ ಮೇಲೆ ಮಲಗಿದ್ದರು. ಈ ವೇಳೆ ಮನೆಯೊಳಗೆ ಹರಿದು ಬಂದ ಹಾವು ಭೈರಪ್ಪರ ಎದೆ ಮೇಲೇರಿ ಕುಳಿತುಕೊಂಡಿದೆ. ಇದನ್ನು ಕಂಡು ಭಯಗೊಂಡ ಅವರು ತಕ್ಷಣ ಹಾವನ್ನು ಬದಿಗೆ ತಳ್ಳಿದ್ದಾರೆ.
ಕೆಳಗೆ ಬಿದ್ದ ಹಾವು ಮಂಚದ ಕೆಳಕ್ಕೆ ಹೋಗಿ ಸೇರಿಕೊಂಡಿದೆ. ಕೂಡಲೇ ಮಗ ಉರಗ ರಕ್ಷಕ ಕಿರಣ್ ಎಂಬವರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ ಕಿರಣ್ 3 ಅಡಿ ಉದ್ದದ ನಾಗರಹಾವನ್ನು ರಕ್ಷಣೆ ಮಾಡಿದರು. ಬಳಿಕ ಸೆರೆ ಹಿಡಿದ ಹಾವನ್ನು ಕೊಂಡೊಯ್ದು ಅರಣ್ಯಕ್ಕೆ ಬಿಟ್ಟು ಬಂದಿದ್ದಾರೆ.
ಮಲವಗೊಪ್ಪ ಭಾಗದಲ್ಲಿ ಗದ್ದೆಗಳಿದ್ದು, ಸಾಕಷ್ಟು ಖಾಲಿ ಜಾಗಗಳೂ ಇವೆ. ಗದ್ದೆಯಿಂದ ಆಹಾರ ಅರಸುತ್ತಾ ಬೈರಪ್ಪ ಅವರ ಮನೆಗೆ ಹಾವು ನುಗ್ಗಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ನೀರಿನ ಕಟ್ಟೆಯಲ್ಲಿ ಬಾಯಾರಿಕೆ ತಣಿಸಿಕೊಂಡ ಹುಲಿ: ವಿಡಿಯೋ