ವಿಧಾನಸೌಧದಲ್ಲಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ: ನೇರಪ್ರಸಾರ - CM Press Meet - CM PRESS MEET

🎬 Watch Now: Feature Video

thumbnail

By ETV Bharat Karnataka Team

Published : Jul 26, 2024, 11:14 AM IST

Updated : Jul 26, 2024, 1:00 PM IST

ಬೆಂಗಳೂರು: ಒಂದು ದಿನದ ಅಧಿವೇಶನ ಮೊಟಕಿನೊಂದಿಗೆ ಎಂಟು ದಿನಗಳ ವಿಧಾನ ಮಂಡಲದ ಮುಂಗಾರು ಅಧಿವೇಶನ ಗುರುವಾರ ಮುಕ್ತಾಯವಾಗಿದೆ. ಮೈಸೂರು ಅಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿನ ಸೈಟ್ ಹಂಚಿಕೆ ಹಗರಣದ ಸಂಬಂಧ ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಆಗ್ರಹಿಸಿ ಪ್ರತಿಪಕ್ಷಗಳ ಗದ್ದಲದ ಮಧ್ಯೆ ಕಲಾಪ ಮುಕ್ತಾಯವಾಗಿದೆ. ಇದರ ಬೆನ್ನಲ್ಲೇ ಸಿಎಂ ಸಿದ್ದರಾಮಯ್ಯ ಇಂದು ವಿಧಾನಸೌಧದಲ್ಲಿ ಸುದ್ದಿಗೋಷ್ಟಿ ಕರೆದಿದ್ದು, ನೇರ ಪ್ರಸಾರ ಇಲ್ಲಿದೆ.ಮುಡಾ ಹಗರಣ ಸಂಬಂಧ ಪ್ರತಿಪಕ್ಷಗಳ ಆರೋಪಕ್ಕೆ ಪ್ರತ್ಯುತ್ತರವಾಗಿ ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಟಿಯಲ್ಲಿ ವಿವರಣೆ ನೀಡಲಿದ್ದಾರೆ. ಸದನದಲ್ಲಿ ಮುಡಾ ಚರ್ಚೆಗೆ ಸ್ಪೀಕರ್ ಮತ್ತು ಸಭಾಪತಿ ಅವಕಾಶ ನೀಡದ ಕಾರಣ ಪ್ರತಿಪಕ್ಷಗಳು ಅಹೋರಾತ್ರಿ ಧರಣಿ ನಡೆಸಿದ್ದರು. ಸದನದಲ್ಲೇ ರಾತ್ರಿಯಿಡೀ ಮಲಗುವ ಮೂಲಕ ಪ್ರತಿಭಟನೆ ಮಾಡಿದ್ದರು. ಬಳಿಕ ನಿನ್ನೆ ಕೂಡ ಸದನದಲ್ಲಿ ಚರ್ಚೆಗೆ ಪಟ್ಟು ಹಿಡಿದು ಪ್ರತಿಭಟನೆ ಮುಂದುವರಿಸಿದ್ದರು. ಇದರಿಂದ ಕಲಾಪದಲ್ಲಿ ಗದ್ದಲ ಉಂಟಾಗಿತ್ತು.ಇದೀಗ ಸಿಎಂ ಸಿದ್ದರಾಮಯ್ಯ ಮುಡಾ ವಿಚಾರ ಸೇರಿ ಪ್ರತಿಪಕ್ಷಗಳ ಆರೋಪ, ವಾಲ್ಮೀಕಿ ಅಭಿವೃದ್ಧಿ ನಿಗಮ ಅಕ್ರಮ ಸಂಬಂಧ ಸುದ್ದಿಗೋಷ್ಟಿಯಲ್ಲಿ ವಿವರಣೆ ನೀಡುವ ಸಾಧ್ಯತೆ ಇದೆ.  
Last Updated : Jul 26, 2024, 1:00 PM IST

ABOUT THE AUTHOR

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.