ಭಾರತದ ಶಾಸ್ತ್ರೀಯ ನೃತ್ಯ 'ಭರತನಾಟ್ಯ ಪ್ರದರ್ಶನ' ನೀಡಿ ಇತಿಹಾಸ ಬರೆದ ಚೀನೀ ಬಾಲಕಿ- ವಿಡಿಯೋ - Chinese Girl Bharatanatyam

By ETV Bharat Karnataka Team

Published : Aug 14, 2024, 8:23 PM IST

thumbnail
ಭರತನಾಟ್ಯ ಪ್ರದರ್ಶನ ನೀಡಿ ಇತಿಹಾಸ ಬರೆದ ಚೀನೀ ಬಾಲಕಿ (X Handle)

ಹೈದರಾಬಾದ್​: ಭಾರತದ ಪ್ರಾಚೀನ ನೃತ್ಯ ಪ್ರಕಾರವಾದ ಭರತನಾಟ್ಯ ಚೀನಾದಲ್ಲೂ ಮೇಳೈಸಿದೆ. ಅಲ್ಲಿನ 13 ವರ್ಷದ ವಿದ್ಯಾರ್ಥಿನಿ ಲೀ ಮಝಿ ಎಂಬುವವರು 'ಆರಂಗೇಟ್ರಂ' ನೃತ್ಯ ಪ್ರದರ್ಶನ ನೀಡುವ ಮೂಲಕ ಇತಿಹಾಸ ಬರೆದಿದ್ದಾರೆ. ಖ್ಯಾತ ಭರತನಾಟ್ಯ ಕಲಾವಿದೆ ಲೀಲಾ ಸ್ಯಾಮ್ಸನ್​​, ಭಾರತೀಯ ರಾಜತಾಂತ್ರಿಕರು ಮತ್ತು ತಜ್ಞರು ಇದ್ದ ಸಭಾಂಗಣದಲ್ಲಿ ಲೀ ಮಝಿ ಅವರು ದಕ್ಷಿಣ ಭಾರತ ಸಾಂಪ್ರದಾಯಿಕ ನೃತ್ಯದ ರಂಗಪ್ರವೇಶ ಮಾಡಿದರು.

ಪ್ರಾಚೀನ ಭಾರತೀಯ ನೃತ್ಯವು ನೆರೆಯ ದೇಶದಲ್ಲಿ ಪಡೆಯುತ್ತಿರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ. ಬಾಲಕಿ ಲೀ ನೃತ್ಯ ಕಲಿಯಲು ದಶಕಗಳ ಕಾಲ ಪ್ರಯತ್ನ ಪಟ್ಟಿದ್ದಾರೆ. ಚೀನಾದಲ್ಲಿ ಭಾರತೀಯ ಶಾಸ್ತ್ರೀಯ ಕಲೆಯ ನೃತ್ಯ ಪ್ರದರ್ಶನ ನಡೆದಿದ್ದು ಇದೇ ಮೊದಲು. ಪ್ರೇಕ್ಷಕರನ್ನು ಹೊರತುಪಡಿಸಿ ಶಿಕ್ಷಕರು ಮತ್ತು ತಜ್ಞರ ಮುಂದೆ ಮಾಡುವ ನೃತ್ಯ ಪ್ರದರ್ಶನಕ್ಕೆ ಆರಂಗೇಟ್ರಂ ಎಂದು ಕರೆಯಲಾಗುತ್ತದೆ. ವಿಶೇಷವೆಂದರೆ, ಚೀನೀ ಬಾಲಕಿಗೆ ತರಬೇತಿ ನೀಡಿದ್ದು, ಆ ದೇಶದ ಖ್ಯಾತ ಭರತನಾಟ್ಯ ಕಲಾವಿದೆ ಜಿನ್​ ಶಾನ್​​. ಚೀನೀ ಶಿಕ್ಷಕರಿಂದ ತರಬೇತಿ ಪಡೆದು ನೀಡಿದ ಮೊದಲ ಪ್ರದರ್ಶನವಾಗಿದೆ.

ಎರಡು ಗಂಟೆಗಳ ಕಾಲ ನಡೆದ ಪ್ರದರ್ಶನದಲ್ಲಿ ಬಾಲಕಿ ಲೀ ಅವರು ನೆರೆದಿದ್ದ ಅಭಿಮಾನಿಗಳಿಗೆ ಸಂಗೀತ ನೃತ್ಯದ ಮನರಂಜನೆ ನೀಡಿದರು. ಈ ತಿಂಗಳ ಅಂತ್ಯದಲ್ಲಿ ಭಾರತದ ಚೆನ್ನೈನಲ್ಲಿ ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ. ಚೀನಾದ ಭರತನಾಟ್ಯ ಕಲಾವಿದೆ ಜಿನ್​ ಶಾನ್​ ಅವರು ಭಾರತದಲ್ಲಿ ತರಬೇತಿ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಪದ್ಮವಿಭೂಷಣ ಪುರಸ್ಕೃತ ದಿಗ್ಗಜ ಭರತನಾಟ್ಯ ಕಲಾವಿದೆ ಯಾಮಿನಿ ಕೃಷ್ಣಮೂರ್ತಿ ಇನ್ನಿಲ್ಲ - Yamini Krishnamurthy

ABOUT THE AUTHOR

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.